Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. 'ಲೈಟ್ ಫಿಶ್ಶಿಂಗ್ ಮೀನುಗಾರಿಕೆ ವಿವಾದ :...

'ಲೈಟ್ ಫಿಶ್ಶಿಂಗ್ ಮೀನುಗಾರಿಕೆ ವಿವಾದ : ವೆಂಕಟಾಪುರದಲ್ಲಿ ಸೌಹಾರ್ದ ಸಭೆ'

ವಾರ್ತಾಭಾರತಿವಾರ್ತಾಭಾರತಿ6 Feb 2019 10:46 PM IST
share

ಭಟ್ಕಳ, ಫೆ. 6: ಇಲ್ಲಿನ ಪರ್ಷಿಯನ್ ಬೋಟ್ ಹಾಗೂ ಫಿಶ್ಶಿಂಗ್ ಬೋಟ್ ಮೀನುಗಾರರು, ನಾಡದೋಣಿ ಮೀನುಗಾರರು, ಟ್ರಾಲ್ ಬೋಟ್ ಹಾಗೂ ಸಣ್ಣ ಬೋಟ್ ಮೀನುಗಾರರನ್ನೊಳಗೊಂಡಂತೆ ಇಲ್ಲಿನ ಮೀನುಗಾರಿಕಾ ಇಲಾಖೆಯಿಂದ ಇಲ್ಲಿನ ಶಿರಾಲಿ ವೆಂಕಟಾಪುರ ಲಕ್ಷ್ಮೀ ನಾರಾಯಣ ಸಭಾಭವನದಲ್ಲಿ ಲೈಟ್ ಫಿಶ್ಶಿಂಗ್ ಕುರಿತಾಗಿ ಸೌಹಾರ್ದ ಸಭೆ  ನಡೆಯಿತು.

ಸಭೆಯಲ್ಲಿ ತಾಲುಕಾ ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ ಸಾಂಪ್ರದಾಯಿಕ ಪರ್ಷಿಯನ್ ಬೋಟ್, ಫಿಶ್ಶಿಂಗ್ ಬೋಟ್ ಮೀನುಗಾರರು, ನಾಡದೋಣಿ ಮೀನುಗಾರರು, ಟ್ರಾಲ್ ಬೋಟ್ ಹಾಗೂ ಸಣ್ಣ ಬೋಟ್ ಮೀನುಗಾರರಿಗೆ ಇಲಾಖೆಗಳ ಹಾಗೂ ಕಾನೂನು ವ್ಯಾಪ್ತಿಯಲ್ಲಿನ ವಿವರನ್ನು ತಿಳಿಸಿ ದರು. ಹಾಗೂ ಕಾನೂನು ಬದ್ಧವಾಗಿ ಇರುವ ಕ್ರಮವನ್ನು ಮೀನುಗಾರರು ಅನುಸರಿಸಬೇಕಾದ ರೀತಿಯ ಬಗ್ಗೆ ಮನವೋಲಿಕೆ ಮಾಡಿಕೊಡಲಾಯಿತು.

ಸಭೆಯಲ್ಲಿ ಟ್ರಾಲ್ ಬೋಟ ಮೀನುಗಾರ ಪ್ರಮುಖರು ಮೀನುಗಾರರಿಗೆ ಮೀನುಗಾರಿಕೆಗೆ ಉಪಯೋಗಿಸುವ ಬಲೆಯ ಮೆಸ್ 35 ಎಮ್ ಎಮ್ ಇದ್ದು ಇದನ್ನು 18-20 ಎಮ್.ಎಮ್. ಆಗುವಂತೆ ಸರಕಾರದ ಗಮನಕ್ಕೆ ತರುವಂತೆ ಮನವಿ ಮಾಡಿಕೊಂಡರು. ಇನ್ನು ಮಹಾರಾಷ್ಟ್ರ ಗೋವಾದಿಂದ ಕರಾವಳಿಯ ಮಂಗಳೂರಿನ ವರೆಗೆ ಅವ್ಯಾಹತವಾಗಿ ಮೀನುಗಾರಿಕೆ ನಡೆಯುತ್ತಿದ್ದು ತಾಲೂಕಿನ ಎಲ್ಲಾ ಮೀನುಗಾರಿಕಾ ಸಂಘ ಮೀನುಗಾರಿಕೆ ಮಾಡಿದ ಬಳಿಕ ಪರ್ಷಿಯನ್ ಮೀನುಗಾರರು ಮೀನುಗಾರಿಕೆ ತೆರಳುವದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಗೋವಾ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಲೈಟ್ ಫಿಶ್ಶಿಂಗ್ ತಾಲೂಕಿನಲ್ಲಿ ಯಾಕೆ ಅವಕಾಶವಿಲ್ಲ. ಅವರಿಗೆ ನೀಡಿದಂತೆ ನಮಗೂ ಸಹ ಸಡಿಲತೆ ನೀಡಿ ಲೈಟ್ ಫಿಶ್ಶಿಂಗ್ ಮಾಡಲು ಅವಕಾಶ ನೀಡಿ. ಹಾಗೂ ಲೈಟ ಫಿಶ್ಶಿಂಗ್ ಸ್ಥಗಿತಗೊಳಿಸುವುದಾದರೆ ಕಾನೂನು ಒಂದೇ ಮಾಡಿ ಎಂದು ಹೇಳಿದರು.

ಇದಕ್ಕೆ ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ ಇಲಾಖೆಗಳು ಕಾನೂನಾತ್ಮಕವಾಗಿ ಕಾರ್ಯ ಮಾಡುತ್ತಿದ್ದು, ಪದೇ ಪದೇ ಇಲಾಖೆಗಳ ಮೇಲೆ ತಪ್ಪು ಹೋರಿಸಬೇಡಿ. ತಾಲೂಕಾ ವ್ಯಾಪ್ತಿಯಲ್ಲಿ ವಿಚಾರದಲ್ಲಿ ನಾವು ಅಧಿಕಾರಿ ವಹಿಸಿಕೊಂಡು ಕೆಲಸ ಮಾಡಬಹುದಾಗಿದ್ದು ಆದರೆ ಎಲ್ಲೆಡೆ ಲೈಟ್ ಫಿಶ್ಶಿಂಗ್ ಸ್ಥಗಿತಗೊಳಿಸುವ ಅಧಿಕಾರ ನಮ್ಮಲ್ಲಿಲ್ಲ ಎಂದು ತಿಳಿಸಿದ ಅವರು ಸಭೆಯಲ್ಲಿ ಚರ್ಚಿಸಲಾದ ವಿಷಯವನ್ನು ಸರಕಾರದ ಗಮನಕ್ಕೆ ತಂದಿದ್ದು ಎಲ್ಲಾ ಅಹವಾಲನ್ನು ಸ್ವೀಕರಿಸಿದ್ದೇವೆ ಎಂದರು.

ಇದೇ ವೇಳೆ ನಾಡದೋಣಿ ಮೀನುಗಾರರ ಪ್ರಮುಖ ಮಾತನಾಡಿ 'ಲೈಟ್ ಫಿಶ್ಶಿಂಗ್ ಸ್ಥಗಿತಗೊಳಿಸುವ ವಿಚಾರದಲ್ಲಿ ನಾಡದೋಣಿ ಮೀನುಗಾರರನ್ನೇ ಗುರಿಯಾಗಿಸುತ್ತಿರುವುದು ಸಮಂಜಸವಲ್ಲ. ಲೈಟ್ ಫಿಶ್ಶಿಂಗ್ ನಡೆಸಲು ಪರ್ಷಿಯನ್ ಬೋಟ ಮೀನುಗಾರರಿಗೆ ಒಪ್ಪಿಗೆ ಬೇಕಾಗಿದ್ದು ಆದರೆ ಎಲ್ಲಾ ಸಾಂಪ್ರದಾಯಿಕ ಮೀನುಗಾರರ ಒಪ್ಪಿಗೆ ಸಹಮತ ಪಡೆದು ಮುಂದುವರೆಯಲಿ ಎಂದು ಹೇಳಿದರು.

ಈ ವೇಳೆ ಸಭೆಯಲ್ಲಿ ನಾಡದೋಣಿ ಮೀನುಗಾರರು ಹಾಗೂ ಪರ್ಷಿಯನ ಮೀನುಗಾರರ ಪ್ರಮುಖರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಈ ವೇಳೆ ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ ಮೀನುಗಾರರನ್ನು ಸಮಾಧಾನ ಪಡಿಸಿದರು. ಎಲ್ಲಾ ಸಾಂಪ್ರದಾಯಿಕ ಮೀನುಗಾರರು ಕಾನೂನು ಬದ್ಧವಾಗಿ ಮೀನುಗಾರಿಕೆಗೆ ತೆರಳುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಹಾಗೂ ಈ ಬಗ್ಗೆ ಒಪ್ಪಂದ ಪತ್ರಕ್ಕೆ ಎಲ್ಲಾ ಸಾಂಪ್ರದಾಯಿಕ ಮೀನುಗಾರರ ಸಂಘದ ಅಧ್ಯಕ್ಷರ ಸಹಿ ಪಡೆದು ಆ ಮೂಲಕ ಮುಂದಿನ ಕಾರ್ಯವನ್ನು ನಡೆಸಲಿರುವ ಬಗ್ಗೆ ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ ಸಭೆಯಲ್ಲಿ ತಿಳಿಸಿದರು. ಅಂತ್ಯದಲ್ಲಿ ಎಲ್ಲಾ ಸಾಂಪ್ರದಾಯಿಕ ಮೀನುಗಾರ ಸಂಘದ ಮೀನುಗಾರರು 2 ತಿಂಗಳ ಕಾಲಾವಕಾಶ ಪಡೆದುಕೊಂಡರು.  ಈ ಬಗ್ಗೆ ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ ಮೇಲಾಧಿಕಾರಿಗಳಿಗೆ ಸಭೆಯ ಬೆಳವಣಿಗೆಯ ಬಗ್ಗೆ ತಿಳಿಸಿ ಮುಂದಿನ ಕ್ರಮದಂತೆ ಕಾರ್ಯಪ್ರವೃತ್ತರಾಗಲಿದ್ದೇವೆ ಎಂದು ಹೇಳಿದರು.  

ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಮೀನುಗಾರಿಕಾ ಸಹಾಯಕ ನಿರ್ದೇಶಕ ರವಿ 'ಸಾಂಪ್ರದಾಯಿಕ ಮೀನುಗಾರರ ಮಧ್ಯೆ ಲೈಟ್ ಫಿಶ್ಶಿಂಗ್ ವಿಚಾರವಾಗಿ ಸಂಘರ್ಷ ಉಂಟಾಗಿದ್ದರ ಹಿನ್ನೆಲೆ ಸೌಹಾರ್ದಯುತ ಸಭೆ ನಡೆಸಲಾಯಿತು. ಎಲ್ಲಾ ಬಂದರದಲ್ಲಿ ಕಾನೂನು ಬದ್ಧವಾಗಿ ಮೀನುಗಾರಿಕೆಗೆ ತೆರಳುವಂತೆ ಎಲ್ಲಾ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಇಲಾಖೆ ಅಧಿಕಾರಿಗಳು ಆಯಾ ಬಂದರದಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ. ಈ ವೇಳೆ ಕಾನುನು ಉಲ್ಲಂಘನೆ ಮಾಡಿ ಮೀನುಗಾರಿಕೆಗೆ ತೆರಳಿದರೆ ಅಂತಹ ಬೋಟ್ ಅಥವಾ ದೋಣಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗಿವದು ಎಂದು ಸಭೆಯಲ್ಲಿ ತಿಳಿಸಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಈ ಸಂಧರ್ಭದಲ್ಲಿ ಪರ್ಷಿಯನ ಬೋಟ್ ಅಧ್ಯಕ್ಷ ಗಣೇಶ ಮೋಗೇರ, ಕರಾವಳಿ ಕಾವಲು ಪಡೆ ಸಿಪಿಐ ಸುರೇಶ ನಾಯಕ ಸೇರಿದಂತೆ ನಾಡದೋಣಿ ಬೋಟ್ ಮೀನುಗಾರ ಪ್ರಮುಖರು, ಸಣ್ಣ ಬೋಟ್ ಮೀನುಗಾರರ ಪ್ರಮುಖ ಮುಂತಾದವರು ಇದ್ದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X