ಹಳೆಯಂಗಡಿ ಕದಿಕೆ ಉರೂಸ್ ಗೆ ಚಾಲನೆ

ಮಂಗಳೂರು, ಫೆ. 6: ಔಲಿಯಾಗಳ ಜೀವನ ಶೈಲಿಯನ್ನು ಮೈಗೂಡಿಸಿ ಕೊಂಡರೆ ಇಹ ಪರಗಳಲ್ಲಿ ವಿಜಯ ಖಚಿತ ಎಂದು ಕೆ.ಪಿ. ಇರ್ಶಾದ್ ದಾರಿಮಿ ಮಿತ್ತಬೈಲ್ ಹೇಳಿದರು.
ಹಳೆಯಂಗಡಿ ಕದಿಕೆ ಉರೂಸ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಜುಮಾ ಮಸೀದಿಯ ಖತೀಬ್ ಕೆ.ಎಚ್. ಅಬ್ದುಲ್ ರಹ್ಮಾನ್ ಫೈಝಿ ವಹಿಸಿದ್ದರು. ಕೇರಳ ಕೋಟಿಕುಳಂ ಜುಮಾ ಮಸೀದಿಯ ಪ್ರಧಾನ ಇಮಾಮ್ ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಉಪನ್ಯಾಸ ನೀಡಿದರು.
ಉದ್ಘಾಟನೆಗೂ ಮುನ್ನ ಮರ್ಹೂಂ ಹಾಜಿ ಕೆ.ಸಿ.ಮೊಯ್ದಿನ್ ಮುಸ್ಲಿಯಾರ್ ಅವರ ಖಬರ್ ಝಿಯಾರತ್ ಮತ್ತು ದರ್ಗಾ ಝಿಯಾರತ್ ನಡೆಯಿತು.
ಸಮಾರಂಭದಲ್ಲಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಕಾರ್ಯದರ್ಶಿ ಫಕ್ರದ್ದೀನ್, ಉರೂಸ್ ಸಮಿತಿಯ ಅಧ್ಯಕ್ಷ ಬಶೀರ್ ಅಹ್ಮದ್ ಕಲ್ಲಾಪು, ಬದ್ರಿಯಾ ಜುಮಾ ಮಸೀದಿಯ ಖತೀಬ್ ಇ.ಎಂ.ಅಬ್ದುಲ್ಲಾ ಮದನಿ, ಸಂತೆಕಟ್ಟೆ ಜುಮಾ ಮಸೀದಿಯ ಖತೀಬ್ ಅಬೂಬಕರ್ ಮದನಿ, ಇಂದಿರಾ ನಗರ ಮದರಸ ಸದರ್ ಮುಅಲ್ಲಿಮ್ ಹನೀಫ್ ದಾರಿಮಿ ಮತ್ತಿತರರು ಉಪಸ್ಥಿತರಿದ್ದರು.
Next Story





