ಟ್ವಿಟರಿಗರ ತಲೆಗೆ ಹುಳ ಬಿಟ್ಟ ಮಾಯಾವತಿ ಖಾತೆಯ ಹೆಸರು

ಹೊಸದಿಲ್ಲಿ,ಫೆ.6: ಟ್ವಿಟರ್‌ನಲ್ಲಿ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿಯವರ ಹೆಸರಿನ ಖಾತೆಯೊಂದು ಪ್ರತ್ಯಕ್ಷವಾದ ಎರಡು ವಾರಗಳ ನಂತರ ಖಾತೆ ನಿಜವಾಗಿಯೂ ಮಾಯಾವತಿಯವರಿಗೆ ಸೇರಿದ್ದಾಗಿದೆ ಎಂಬುದು ದೃಢಪಟ್ಟಿದೆ. ಇದೇ ವೇಳೆ ಮಾಯಾವತಿ ತಮ್ಮ ಹೆಸರಿನ ಮುಂದೆ ‘ಸುಶ್ರೀ’ ಎಂದು ಸೇರಿಸಿರುವುದು ಯಾಕೆ ಎಂದು ಟ್ವಿಟ್ಟಿಗರು ಅವರನ್ನು ಪ್ರಶ್ನಿಸಿದ್ದಾರೆ.
ಮಾಯಾವತಿ ಮಾಡಿದ ಮೊದಲ ಟ್ವೀಟ್‌ನಲ್ಲಿ, “ಸಕಲ ಗೌರವಗಳೊಂದಿಗೆ ನಾನು ನನ್ನನ್ನು ಟಿಟ್ಟರ್ ಕುಟುಂಬಕ್ಕೆ ಪರಿಚಯಿಸುತ್ತಿದ್ದೇನೆ. ಇದು ನನ್ನ ಉದ್ಘಾಟನಾ ಟ್ವೀಟ್. ಮುಂದಿನ ನನ್ನ ಎಲ್ಲ ಸಮಾಲೋಚನೆಗಳು, ಹೇಳಿಕೆಗಳು ಮತ್ತು ದಿನನಿತ್ಯದ ವಿಷಯಗಳನ್ನು ಪ್ರಸ್ತಾಪಿಸುವುದಾಗಿ” ತಿಳಿಸಿದ್ದರು. ಆದರೆ ಮಾಯಾವತಿ ತಮ್ಮನ್ನು ‘ಸುಶ್ರೀ’ ಎಂದು ಯಾಕೆ ಸಂಬೋಧಿಸಿದ್ದಾರೆ ಎನ್ನುವುದೇ ಟ್ವಿಟಗರಿಗೆ ಯಕ್ಷಪ್ರಶ್ನೆಯಾಗಿ ಉಳಿದಿದೆ. ಮಾಯಾವತಿ ಟ್ವಿಟರ್ ಖಾತೆ ಈಗಾಗಲೇ 25,000 ಫಾಲೊವರ್ಸ್‌ಗಳನ್ನು ಗಳಿಸಿಕೊಂಡಿದೆ. ಪಕ್ಷದ ವಕ್ತಾರರ ಪ್ರಕಾರ, ಕಾರ್ಯಕರ್ತರ ಜೊತೆ ನಿಯಮಿತವಾಗಿ ಸಂಪರ್ಕದಲ್ಲಿರುವ ಉದ್ದೇಶದಿಂದ ಮಾಯಾವತಿ ಟ್ವಿಟರ್‌ಗೆ ಪದಾರ್ಪಣೆ ಮಾಡಿದ್ದಾರೆ.





