ಕೃಷಿ-ಮಾರುಕಟ್ಟೆ ಮೂಲಸೌಕರ್ಯ ನಿಧಿ ಸ್ಥಾಪನೆಗೆ ಕೇಂದ್ರ ಸಂಪುಟದ ಒಪ್ಪಿಗೆ

ಹೊಸದಿಲ್ಲಿ,ಫೆ.6: ಗ್ರಾಮೀಣ ಕೃಷಿ ಮಾರುಕಟ್ಟೆಗಳ ಅಭಿವೃದ್ಧಿ ಮತ್ತು ಉನ್ನತೀಕರಣಕ್ಕಾಗಿ 2,000 ಕೋ.ರೂ.ಗಳ ಕೃಷಿ-ಮಾರುಕಟ್ಟೆ ಮೂಲಸೌಕರ್ಯ ನಿಧಿ(ಎಎಂಐಎಫ್)ಯನ್ನು ಸ್ಥಾಪಿಸಲು ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ.
ನಬಾರ್ಡ್ ಈ ನಿಧಿಯನ್ನು ಸ್ಥಾಪಿಸಲಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.
ಎಎಂಐಎಫ್ 585 ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗಳು ಮತ್ತು 10,000 ಗ್ರಾಮಗಳಲ್ಲಿ ಮಾರುಕಟ್ಟೆ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ಸಬ್ಸಿಡಿ ದರಗಳಲ್ಲಿ ಸಾಲಗಳನ್ನು ಒಸಗಿಸಲಿದೆ ಎಂದು ಅದು ಹೇಳಿದೆ.
ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ಸೇರಿದಂತೆ ವಿನೂತನ ಸಮಗ್ರ ಮಾರುಕಟ್ಟೆ ಮೂಲಸೌಕರ್ಯ ಯೋಜನೆಗಳಿಗಾಗಿ ರಾಜ್ಯಗಳು ಎಎಂಐಎಫ್‌ನಿಂದ ನೆರವು ಪಡೆಯಬಹುದಾಗಿದೆ ಎಂದೂ ಅದು ತಿಳಿಸಿದೆ.
Next Story





