ಬೆರ್ಡಿಕ್‌ಗೆ ಜಯ: ಸಡ್ ಡಿ ಫ್ರಾನ್ಸ್ ಓಪನ್
ಮೊಂಟ್‌ಪೆಲ್ಲಿಯರ್(ಫ್ರಾನ್ಸ್), ಫೆ.6: ಮಾಜಿ ಚಾಂಪಿಯನ್ ಝೆಕ್ ಗಣರಾಜ್ಯದ ಥಾಮಸ್ ಬೆರ್ಡಿಕ್ ರವಿವಾರ ಜರ್ಮನಿಯ ಕ್ವಾಲಿಫೈಯರ್ ಆಟಗಾರ ಮತಿಯಾಸ್ ಬ್ಯಾಚಿಂಜರ್‌ರನ್ನು 5-7, 6-3, 6-3 ಸೆಟ್‌ಗಳಿಂದ ಸೋಲಿಸಿ ಸಡ್ ಡಿ ಫ್ರಾನ್ಸ್ ಟೆನಿಸ್ ಟೂರ್ನಿಯ 16ರ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.
2012ರಲ್ಲಿ ಈ ಪ್ರಶಸ್ತಿ ಜಯಿಸಿರುವ ಬೆರ್ಡಿಕ್ ತಾವು ಎದುರಿಸಿದ 11ರಲ್ಲಿ 7 ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿಕೊಂಡರು. 2 ತಾಸು 12 ನಿಮಿಷಗಳ ಅವಧಿಯಲ್ಲಿ ಪಂದ್ಯ ಕೊನೆಗೊಂಡಿತು.
ತಮ್ಮ ಮುಂದಿನ ಪಂದ್ಯದಲ್ಲಿ ಬೆರ್ಡಿಕ್, 8ನೇ ಶ್ರೇಯಾಂಕದ ಫ್ರಾನ್ಸ್ ಆಟಗಾರ ಬೆನೊಯಿಟ್ ಪೈರ್ ಅವರನ್ನು ಎದುರಿಸಲಿದ್ದಾರೆ. ಈ ಆಟಗಾರನ ವಿರುದ್ಧ ಆಡಿದ ಕಳೆದ ಮೂರು ಪಂದ್ಯಗಳನ್ನು ಬೆರ್ಡಿಕ್ ಜಯಿಸಿದ್ದಾರೆ.
ಅಮೆರಿಕದ ಡೆನ್ನಿಸ್ ಕುಡ್ಲ ಅವರು 7ನೇ ಶ್ರೇಯಾಂಕದ ಪಿಯರ್ ಹರ್ಬರ್ಟ್ ಅವರ ವಿರುದ್ಧ 2-6, 1-6 ಸೆಟ್‌ಗಳ ಸೋಲು ಅನುಭವಿಸಿದರು.
Next Story





