ಐ-ಲೀಗ್: ಕೇರಳವನ್ನು ಮಣಿಸಿದ ರಿಯಲ್ ಕಾಶ್ಮೀರ್
ಶ್ರೀನಗರ, ಫೆ.6: ಐ-ಲೀಗ್‌ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದ ರಿಯಲ್ ಕಾಶ್ಮೀರ್ ಫುಟ್ಬಾಲ್ ಕ್ಲಬ್ ಗೋಕುಲಂ ಕೇರಳ ಎಫ್‌ಸಿಯನ್ನು ಏಕೈಕ ಗೋಲು ಅಂತರದಿಂದ ಮಣಿಸಿತು. ಇಲ್ಲಿ ಬುಧವಾರ ಕೊರೆಯುವ ಚಳಿಯ ವಾತಾವರಣದಲ್ಲಿ ನಡೆದ ಪಂದ್ಯದಲ್ಲಿ 51ನೇ ನಿಮಿಷದಲ್ಲಿ ಐವರಿಕೋಸ್ಟ್‌ನ ನೊಹೆರಿ ಕ್ರಿರೊ ಏಕೈಕ ಗೋಲು ಗಳಿಸಿ ಕಾಶ್ಮೀರಕ್ಕೆ 1-0 ಅಂತರದ ಗೆಲುವು ತಂದರು. ಈ ಗೆಲುವಿನೊಂದಿಗೆ ಕಾಶ್ಮೀರ ಮೂರಂಕ ಗಳಿಸಿತು. ಒಟ್ಟು 32 ಅಂಕ ಗಳಿಸಿರುವ ಜಮ್ಮು-ಕಾಶ್ಮೀರದ ತಂಡ ಚೆನ್ನೈ ಸಿಟಿ ಎಫ್‌ಸಿಯನ್ನು ಹಿಂದಿಕ್ಕಿದೆ. ರಿಯಲ್ ಕಾಶ್ಮೀರ ತಂಡ ರವಿವಾರ ತನ್ನ ತವರು ಮೈದಾನದಲ್ಲಿ ಈಸ್ಟ್ ಬೆಂಗಾಳ ತಂಡವನ್ನು ಎದುರಿಸಲಿದೆ. ಪ್ರತಿ ತಂಡಗಳು ಲೀಗ್‌ನಲ್ಲಿ 20 ಪಂದ್ಯಗಳನ್ನು ಆಡಲಿದ್ದು,ಕಾಶ್ಮೀರಕ್ಕೆ ಇನ್ನೆರಡು ಪಂದ್ಯ ಆಡಲು ಬಾಕಿಯಿದೆ.
Next Story





