ಜೆಡಿಎಸ್ ಶಾಸಕ ನಾರಾಯಣ ಗೌಡ ನಡೆ ನಿಗೂಢ… !

ಬೆಂಗಳೂರು, ಫೆ.7: ಜೆಡಿಎಸ್ ನ ಶಾಸಕ ನಾರಾಯಣ ಗೌಡ ನಡೆ ಇನ್ನೂ ನಿಗೂಢವಾಗಿದೆ. ಬುಧವಾರ ಸದನಕ್ಕೆ ಗೈರು ಹಾಜರಾಗಿದ್ದ ನಾರಾಯಣ ಗೌಡ ಸದ್ಯಕ್ಕೆ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ನಾರಾಯಣ ಗೌಡ ಎಲ್ಲಿಗೆ ಹೋಗಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಅವರ ಮೊಬೈಲ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರು ಮುಂಬೈ ಸೇರಿದ್ದಾರಾ ? ಎಂಬ ಅನುಮಾನ ಕಾಡತೊಡಗಿದೆ.
ಬಜೆಟ್ ಅಧಿವೇಶನಕ್ಕೆ ವಿಪ್ ಜಾರಿಗೊಳಿಸಿದ್ದರೂ ಅವರು ನಿನ್ನೆ ಗೈರು ಹಾಜರಾಗಿದ್ದರು. ಅವರಿಗೆ ಅಸೌಖ್ಯದ ಕಾರಣದಿಂದಾಗಿ ಸಭೆಗೆ ಗೈರು ಹಾಜರಾಗಿದ್ದರು ಎಂದು ಹೇಳಲಾಗಿತ್ತು.
ಕೆ.ಆರ್ ಪೇಟೆಯ ಶಾಸಕ ನಾರಾಯಣ ಎಲ್ಲಿದ್ದಾರೆಂದು ಯಾರಿಗೂ ಗೊತ್ತಿಲ್ಲ. ಅವರ ಪಕ್ಷದ ನಾಯಕರು ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ನ ಐದು ಮಂದಿ ಶಾಸಕರು ಸದನಕ್ಕೆ ಗೈರು ಹಾಜರಾಗಿದ್ದರು. ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಚಿಂಚೋಳಿ ಶಾಸಕ ಉಮೇಶ್ ಜಾಧವ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಕಂಪ್ಲಿ ಶಾಸಕ ಗಣೇಶ್ ಗೈರಾಗಿದ್ದರು. ಇವರೆಲ್ಲಾ ಮುಂಬೈನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.





