ಫೆ.9: ವಿಜಯಪುರದಲ್ಲಿ ಮೀಲಾದೇ ಮುಸ್ತಫ ಕಾನ್ಫರೆನ್ಸ್

ವಿಜಯಪುರ, ಫೆ.7: ಪ್ರವಾದಿ ಮುಹಮ್ಮದ್(ಸ.) ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಜಮಾಅತೆ ಅಹ್ಲೆ ಸುನ್ನತ್ ಕರ್ನಾಟಕ ಇದರ ವತಿಯಿಂದ ಫೆ.9ರಂದು ‘ಮೀಲಾದೇ ಮುಸ್ತಫ ಕಾನ್ಫರೆನ್ಸ್’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಮಾಅತೆ ಅಹ್ಲೆ ಸುನ್ನತ್ ಕರ್ನಾಟಕದ ಅಧ್ಯಕ್ಷ ಸೈಯದ್ ಮುಹಮ್ಮದ್ ತನ್ವೀರ್ ಹಾಶ್ಮಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಫೆ.9ರಂದು ಸಂಜೆ 4ಗಂಟೆಗೆ ನಗರದ ದರ್ಬಾರ್ ಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಡಾ.ಸೈಯದ್ ಗೇಸುದರಾಜ್ ಖುಸ್ರೋ ಹುಸೇನಿ, ಕೆಬಿಎನ್ ದರ್ಗಾ ಕಲಬುರಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಅತಿಥಿಗಳಾಗಿ ರಾಜ್ಯ ಗೃಹಸಚಿವ ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ, ಎಂ.ಸಿ. ಮನಗೂಳಿ ಸಹಿತ ಅನೇಕ ರಾಜಕೀಯ, ಧಾರ್ಮಿಕ ಮುಖಂಡರು ಭಾಗವಹಿಸುವರು ಎಂದು ಅವರು ತಿಳಿಸಿದರು.
Next Story





