ಹೆಜಮಾಡಿ: ಟೋಲ್ ಪ್ಲಾಝಾ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ

ಪಡುಬಿದ್ರೆ, ಫೆ.7: ಹೆಜಮಾಡಿ ಟೋಲ್ ಪ್ಲಾಝದಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್‌ನಲ್ಲಿ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ 32ನೇ ದಿನಕ್ಕೆ ಕಾಲಿಟ್ಟಿದ್ದು, ಗುರುವಾರ ಟೋಲ್ ಗುತ್ತಿಗೆ ಕಂಪೆನಿ ನವಯುಗ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಧರಣಿ ಸ್ಥಳಕ್ಕೆ ಕೇಂದ್ರ, ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಹಾಗೂ ನವಯುಗ ಕಂಪೆನಿ ಅಧಿಕಾರಿಗಳು ಆಗಮಿಸಿದ್ದರೂ ಸ್ಥಳೀಯರ ಬೇಡಿಕೆ ಈಡೇರಿಸುವ ಬಗ್ಗೆ ಯಾವುದೇ ಸೂಕ್ತ ಭರವಸೆ ನೀಡುತ್ತಿಲ್ಲ. ಅಲ್ಲದೆ ಸಂಸದರು ಇದುವರೆಗೂ ಧರಣಿನಿರತರನ್ನು ಭೇಟಿಯಾಗುವ ಮುಂದಾಗದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕರವೇ ಉಪಾಧ್ಯಕ್ಷ ಆಸಿಪ್ ಆಪದ್ಬಾಂಧವ ಕೆಂಪು ಮಣ್ಣಿಗೆ ನೀರನ್ನು ಹಾಕಿ ಅದರಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಪಡುಬಿದ್ರೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಗೆ ಟೋಲ್‌ನಲ್ಲಿ ವಿನಾಯಿತಿ ನೀಡಬೇಕು. ಈ ನಿಟ್ಟಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಪ್ರಯತ್ನಿಸಲಿ ಎಂದು ಆಗ್ರಹಿಸಿದರು.
ಕರವೇ ತಾಲೂಕು ಅಧ್ಯಕ್ಷ ಸೈಯದ್ ನಿಝಾಮುದ್ದೀನ್, ಬುಡಾನ್ ಸಾಹೇಬ್, ನವೀನ್ ಎನ್. ಶೆಟ್ಟಿ, ಹಸನ್ ಬಾವ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು






.gif)
.gif)
.gif)
.gif)

