ನೀವು ಕೋರ್ಟ್ ಆದೇಶದೊಂದಿಗೆ ಆಟವಾಡಿದ್ದೀರಿ: ನಾಗೇಶ್ವರ ರಾವ್ ಗೆ ಸುಪ್ರೀಂಕೋರ್ಟ್ ಛೀಮಾರಿ
ಫೆಬ್ರವರಿ 12ರಂದು ಹಾಜರಾಗುವಂತೆ ಸಿಬಿಐ ಹಂಗಾಮಿ ನಿರ್ದೇಶಕರಿಗೆ ಸಮನ್ಸ್
ಹೊಸದಿಲ್ಲಿ, ಫೆ.7: ಮುಝಫ್ಫರ್ ಪುರ ಆಶ್ರಯತಾಣ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿ ಎ.ಕೆ.ಶರ್ಮಾರನ್ನು ವರ್ಗಾವಣೆ ಮಾಡಿದ ಬಗ್ಗೆ ವಿವರಿಸಲು ಫೆಬ್ರವರಿ 12ರಂದು ಕೋರ್ಟ್ ಗೆ ಹಾಜರಾಗುವಂತೆ ಸಿಬಿಐ ಹಂಗಾಮಿ ನಿರ್ದೇಶಕ ಎಂ.ನಾಗೇಶ್ವರ ರಾವ್ ರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ನ್ಯಾಯಾಲಯದಿಂದ ಒಪ್ಪಿಗೆ ಪಡೆಯದೆ ಮುಝಫ್ಫರ್ ಪುರ ಆಶ್ರಮದ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಯನ್ನು ಏಕಾಏಕಿ ವರ್ಗಾವಣೆ ಮಾಡುವ ಮೂಲಕ ನಾಗೇಶ್ವರ ರಾವ್ ನ್ಯಾಯಾಂಗವನ್ನು ಉಲ್ಲಂಘಿಸಿದ್ದಾರೆ ಎಂದು ಕೋರ್ಟ್ ಛೀಮಾರಿ ಹಾಕಿದೆ.
“ಇದನ್ನು ನಾವು ತುಂಬಾ ಗಂಭೀರವಾಗಿ ಪರಿಗಣಿಸುತ್ತೇವೆ. ನೀವು ಸುಪ್ರೀಂ ಕೋರ್ಟ್ ಆದೇಶದೊಂದಿಗೆ ಆಟವಾಡಿದ್ದೀರಿ. ದೇವರು ನಿಮಗೆ ಸಹಾಯ ಮಾಡಲಿ. ಸುಪ್ರೀಂ ಕೋರ್ಟ್ ಆದೇಶದೊಂದಿಗೆ ಎಂದಿಗೂ ಆಟವಾಡಬೇಡಿ” ಎಂದು ಕೋರ್ಟ್ ಹೇಳಿದೆ.
Next Story