ಫೆ. 10,11ಕ್ಕೆ ತೋಡಾರು ಅರೆಬಿಕ್ ಕಾಲೇಜಿನ 9ನೇ ವಾರ್ಷಿಕ ಸಮ್ಮೇಳನ
ಮೂಡುಬಿದಿರೆ, ಫೆ. 7: ತೋಡಾರಿನ ಶಂಸುಲ್ ಉಲಮಾ ಅರೆಬಿಕ್ ಕಾಲೇಜು ಇದರ 9ನೇ ವಾರ್ಷಿಕ ಮಹಾ ಸಮ್ಮೇಳನ ಫೆ. 10 ಮತ್ತು 11ರಂದು ಕಾಲೇಜು ಆವರಣದಲ್ಲಿ ನಡೆಯಲಿದೆ.
ಕಾಲೇಜಿನ ಕಾರ್ಯದರ್ಶಿ ಸಲೀಂ ಹಂಡೇಲು ಗುರುವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ನೆರದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಫೆ. 10ರಂದು ಸಂಜೆ ತೋಡಾರು ಮಸೀದಿ ಅಧ್ಯಕ್ಷ ಅಬ್ದುಲ್ ಸಲಾಂ ಧ್ವಜಾರೋಹಣ ನಡೆಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡುವರು. ಅಸ್ಸಯ್ಯಿದ್ ಝೈನಲ್ ಅಬಿದೀನ್ ತಂಙಳ್ ಕುನ್ನುಂಗೈ ಸಮ್ಮೇಳನವನ್ನು ಉದ್ಘಾಟನೆ ಮಾಡಲಿದ್ದಾರೆ. ಬಿ. ಮೊಯ್ದಿನ್ ಅಧ್ಯಕ್ಷತೆ ವಹಿಸುವರು. ಕೇರಳದ ವಾಗ್ಮಿ ಉಸ್ತಾದ್ ಮುನೀರ್ ಹುದವಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್, ಅಲೀ ತಂಙಳ್ ಕುಂಬೋಳ್, ಝೈನಲ್ ಆಬಿದೀನ್ ಜಿಫ್ರಿ, ಅಮೀರ್ ತಂಙಳ್ ಕಿನ್ಯ, ಜುನೈದ್ ಜಿಫ್ರಿ ತಂಙಳ್, ಹಬೀಬುರ್ರಹ್ಮಾನ್ ತಂಙಳ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಫೆ. 11ರಂದು ನಡೆಯುವ ಸಮ್ಮೇಳನದ ಅಧ್ಯಕ್ಷತೆಯನ್ನು ಅಸ್ಸಯ್ಯಿದ್ ಅಬ್ಬಾಸಾಲಿ ಶಿಹಾಬ್ ತಂಙಳ್ ಪಾಣಾಕ್ಕಾಡ್ ವಹಿಸುವರು. ಶೈಖುನಾ ಜಾಮಿಆ ಆಲಿಕುಟ್ಟಿ ಮುಸ್ಲಿಯಾರ್ ಉದ್ಘಾಟನೆ ಮಾಡಲಿದ್ದಾರೆ. ಸಂಸ್ಥೆಯ ಪೂರ್ವ ವಿದ್ಯಾರ್ಥಿ ಅಹ್ಮದ್ ನಹಂ ಮುಕ್ವೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿಯ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಪ್ರಭಾಷಣ ಮಾಡಲಿದ್ದಾರೆ. ಸಚಿವ ಯು.ಟಿ ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್, ಬಿ.ಎಂ ಫಾರೂಕ್, ಸರಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಐವನ್ ಡಿಸೋಜಾ, ಮಾಜಿ ಸಚಿವ ಅಭಯಚಂದ್ರ ಜೈನ್, ಅಮರನಾಥ ಶೆಟ್ಟಿ, ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಉದ್ಯಮಿ ವಿಜಯನಾಥ ವಿಠಲ ಶೆಟ್ಟಿ, ಯು.ಕೆ ಮೋನು ಕಣಚೂರು ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕಾರ್ಯಕ್ರಮದ ಸಂಯೋಜಕ ಉಸ್ಮಾನ್ ಅಬ್ದುಲ್ಲಾ, ಕಾರ್ಯದರ್ಶಿ ಬಾವ ಮುಹ್ಯದ್ದೀನ್, ಕಾಲೇಜಿನ ಪ್ರಾಚಾರ್ಯ ರಫೀಕ್ ಅಹ್ಮದ್ ಹುದವಿ ಕೋಲಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







