ರಾಷ್ಟ್ರೀಯ ಭದ್ರತೆ,ರಫೇಲ್ ಕುರಿತು 5 ನಿಮಿಷ ಚರ್ಚೆಗೆ ಬನ್ನಿ: ಮೋದಿಗೆ ರಾಹುಲ್ ಸವಾಲು
![ರಾಷ್ಟ್ರೀಯ ಭದ್ರತೆ,ರಫೇಲ್ ಕುರಿತು 5 ನಿಮಿಷ ಚರ್ಚೆಗೆ ಬನ್ನಿ: ಮೋದಿಗೆ ರಾಹುಲ್ ಸವಾಲು ರಾಷ್ಟ್ರೀಯ ಭದ್ರತೆ,ರಫೇಲ್ ಕುರಿತು 5 ನಿಮಿಷ ಚರ್ಚೆಗೆ ಬನ್ನಿ: ಮೋದಿಗೆ ರಾಹುಲ್ ಸವಾಲು](https://www.varthabharati.in/sites/default/files/images/articles/2019/02/7/176723.jpg)
ಹೊಸದಿಲ್ಲಿ,ಫೆ.7: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತನ್ನ ದಾಳಿಯನ್ನು ಗುರುವಾರ ಇನ್ನಷ್ಟು ತೀವ್ರಗೊಳಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು,ರಾಷ್ಟ್ರೀಯ ಭದ್ರತೆ ಮತ್ತು ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದ ಕುರಿತು ತನ್ನೊಂದಿಗೆ ಐದು ನಿಮಿಷ ಚರ್ಚೆಗೆ ಬರುವಂತೆ ಅವರಿಗೆ ಸವಾಲು ಒಡ್ಡಿದರು.
ಇಲ್ಲಿ ಪಕ್ಷದ ಅಲ್ಪಸಂಖ್ಯಾತ ಘಟಕಗಳ ಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡುತ್ತಿದ್ದ ರಾಹುಲ್, ‘‘ಮೋದಿಜಿ,ನಿಮ್ಮದು 56 ಇಂಚುಗಳ ಎದೆ ಎಂದು ನೀವು ಹೇಳಿಕೊಂಡಿದ್ದೀರಿ. ನನ್ನೊಂದಿಗೆ ಮುಖಾಮುಖಿ ಚರ್ಚೆಗೆ ಬರುವಂತೆ ನಾನು ನಿಮಗೆ ಸವಾಲು ಒಡ್ಡುತ್ತಿದ್ದೇನೆ ’’ಎಂದು ಹೇಳಿದರು. ಅವರು ಹೆದರಿಕೊಂಡಿದ್ದಾರೆ, ಅವರೊಬ್ಬ ಹೇಡಿ ವ್ಯಕ್ತಿಯಾಗಿದ್ದಾರೆ. ನಾನು ಅವರನ್ನು ಸರಿಯಾಗಿ ಗುರುತಿಸಿದ್ದೇನೆ ಎಂದರು.
ರಾಹುಲ್ ಈ ಹಿಂದೆಯೂ ತನ್ನೊಂದಿಗೆ ಚರ್ಚೆಗೆ ಬರುವಂತೆ ಮೋದಿಯವರಿಗೆ ಸವಾಲು ಒಡ್ಡಿದ್ದರು.
Next Story