ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವ

ಮಂಗಳೂರು, ಫೆ.7: ನಗರದ ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವದ ಎರಡನೆ ದಿನವಾದ ಗುರುವಾರ ಬಲಿ ಪೂಜೆಯನ್ನು ಬಜ್ಜೋಡಿ ಮಂಗಳಾ ಜ್ಯೋತಿ ಕೇಂದ್ರದ ನಿರ್ದೇಶಕ ಫಾ. ವಿಜಯ್ ಮಚಾದೊ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ನಮ್ಮಲ್ಲಿರುವ ಸಂಪತ್ತು ಎಲ್ಲವೂ ದೇವರು ನೀಡಿರುವುದಾಗಿದೆ. ದೇವರು ನಮ್ಮಲ್ಲಿ ಉದಾರಿಯಾದ ಹಾಗೆ ನಾವೂ ಸಹ ಪರರಲ್ಲಿ ಉದಾರಿಗಳಾಗಬೇಕಾಗಿದೆ. ನಾವು ಔದಾರ್ಯ ತೋರಿಸಿದರೆ ಸಮಾಜದಲ್ಲಿನ ಬಡತನ, ಹಸಿವು ಹಾಗೂ ಇನ್ನಿತರ ಪಿಡುಗುಗಳು ನಿವಾರಿಸಲು ಸಾಧ್ಯ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಫಾ. ಫ್ರಾನ್ಸಿಸ್ ಡಿಸೋಜ ನವೇಮಾ ಪ್ರಾರ್ಥನೆ ನಡೆಸಿ ಕೊಟ್ಟರು.
Next Story





