2018ರಲ್ಲಿ ಕೇಂದ್ರ ಸರಕಾರದ ವಿರುದ್ಧ 15.7 ಲಕ್ಷ ದೂರು ಸಲ್ಲಿಕೆ
ಹೊಸದಿಲ್ಲಿ, ಫೆ. 7: ಕೇಂದ್ರ ಸರಕಾರದ ವಿವಿಧ ಇಲಾಖೆಗಳ ವಿರುದ್ಧ ಕಳೆದ ವರ್ಷ ಸುಮಾರು 15.7 ಲಕ್ಷ ಸಾರ್ವಜನಿಕ ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಕೇಂದ್ರ ಸಚಿವರ ಜಿತೇಂದ್ರ ಸಿಂಗ್ ರಾಜ್ಯಸಭೆಗೆ ಗುರುವಾರ ತಿಳಿಸಿದರು.
ಇವುಗಳಲ್ಲಿ 14.98 ಲಕ್ಷ ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ಸುಮಾರು 8.4 ಲಕ್ಷ ದೂರುಗಳು ಬಾಕಿ ಇವೆ ಎಂದು ಅವರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. 2017ರಲ್ಲಿ ಸುಮಾರು 18.66 ಲಕ್ಷ ಸಾರ್ವಜನಿಕ ದೂರುಗಳನ್ನು ಸ್ವೀಕರಿಸಲಾಗಿತ್ತು. ಇವುಗಳಲ್ಲಿ 17.7 ಲಕ್ಷ ದೂರುಗಳನ್ನು ವಿಲೇವಾರಿ ಮಾಡಲಾಗಿತ್ತು ಎಂದು ರಾಜ್ಯ ವೈಯಕ್ತಿಕ, ಸಾರ್ವಜನಿಕ ದೂರುಗಳು ಹಾಗೂ ಪಿಂಚಣಿ ಸಚಿವ ಸಿಂಗ್ ಹೇಳಿದ್ದಾರೆ.
2017ರಲ್ಲಿ ಆನ್‌ಲೈನ್ ಮೂಲಕ ಕೇಂದ್ರ ಸರಕಾರ 14.83 ದೂರುಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 12.62 ಲಕ್ಷ ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಅವರು ತಿಳಿಸಿದರು.
Next Story