ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಪೊಲೀಸ್ ಅಧಿಕಾರಿ ವಿಚಾರಣೆ
ಉಡುಪಿ, ಫೆ.7: ನಗರದ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಅಂದು ಪ್ರಕರಣ ದಾಖಲಿಸಿಕೊಂಡಿದ್ದ, ಮಣಿಪಾಲ ಪೊಲೀಸ್ ಠಾಣೆಯ ಆಗಿನ ಉಪನಿರೀಕ್ಷಿಕ ಗೋಪಾಲಕೃಷ್ಣ ಅವರು ಸಾಕ್ಷ ನುಡಿದರು.
ಗೋಪಾಲಕೃಷ್ಣ ಅವರು ಈ ಪ್ರಕರಣದೊಂದಿಗೆ ತನ್ನ ಬಂಧನದ ಸಂದರ್ಭ ದಲ್ಲಿ ಆರೋಪಿ ನಿರಂಜನ ಭಟ್ ಕೈಯಲ್ಲಿದ್ದ ವಜ್ರದ ಉಂಗುರ ಹಾಗೂ ಕಿವಿ ಓಲೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣದ ಕುರಿತೂ ಸಾಕ್ಷ ನುಡಿದರು. ಇಂದು ಸಾಕ್ಷ ನುಡಿಯಬೇಕಿದ್ದ ಅಂದಿನ ಎರಡನೇ ತನಿಖಾಧಿಕಾರಿಯಾಗಿದ್ದ ಆಗಿನ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ, ಈಗು ಕೊಡಗಿನ ಎಸ್ಪಿ ಆಗಿರುವ ಸುಮನಾ ಅನಿವಾರ್ಯ ಕಾರಣಗಳಿಂದ ಗೈರುಹಾಜ ರಾಗಿದ್ದರು.
ಗೋಪಾಲಕೃಷ್ಣ ಅವರ ವಿಚಾರಣೆಯ ಬಳಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಷಿ ಅವರು ಮುಂದಿನ ವಿಚಾರಣೆಯನ್ನು ಫೆ.27 ಮತ್ತು 28ಕ್ಕೆ ಮುಂದೂಡಿದರು. ಅಂದು ಎಸ್ಪಿ ಹಾಗೂ ಉಳಿದ ಸಾಕ್ಷಿಗಳ ವಿಚಾರಣೆ ನಡೆಯಲಿದೆ. ಸಾಕ್ಷಿಗಳ ಮುಖ್ಯ ವಿಚಾರಣೆಯನ್ನು ವಿಶೇಷ ಸರಕಾರಿ ಅಭಿಯೋಜಕ ಶಾಂತಾರಾಮ್ ಶೆಟ್ಟಿ ನಡೆಸಿದರು.





