ಕೋಟ ಡಬಲ್ ಮರ್ಡರ್: ಇಬ್ಬರು ಆರೋಪಿಗಳ ಬಂಧನ

ಉಡುಪಿ, ಫೆ.7: ಕಳೆದ ಜ.27ರಂದು ಕೋಟದಲ್ಲಿ ನಡೆದ ಇಬ್ಬರು ಯುವಕರ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಇಂದು ಮಡಿಕೇರಿಯಲ್ಲಿ ಬಂಧಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕಾಗಿ ಜ.27ರ ತಡರಾತ್ರಿ ಭರತ್ ಹಾಗೂ ಯತೀಶ್ ಎಂಬ ಇಬ್ಬರು ಯುವಕರನ್ನು ರೌಡಿ ಶೀಟರ್ ಹರೀಶ್ ರೆಡ್ಡಿ ಎಂಬಾತನ ಸಹಚರರು ಸೇರಿ ಬರ್ಬರವಾಗಿ ಕೊಲೆ ಮಾಡಿದ್ದರು.
ಬಂಧಿತರನ್ನು ಪ್ರಕರಣದ ಪ್ರಮುಖ ಆರೋಪಿ ಹರೀಶ್ ರೆಡ್ಡಿಯ ಸಹೋದರ ರಾಜಶೇಖರ್ ರೆಡ್ಡಿ ಹಾಗೂ ತಲ್ಲೂರಿನ ರವಿ ಯಾನೆ ಮೆಡಿಕಲ್ ರವಿ ಎಂದು ತಿಳಿದುಬಂದಿದೆ. ಇವರನ್ನು ಪೊಲೀಸರು ಮಡಿಕೇರಿಯಲ್ಲಿ ಬಂಧಿಸಿರುವುದಾಗಿ ಹೇಳಲಾಗಿದೆ.
ಬಂಧಿತರನ್ನು ಪ್ರಕರಣದ ಪ್ರಮುಖ ಆರೋಪಿ ಹರೀಶ್ ರೆಡ್ಡಿಯ ಸಹೋದರ ರಾಜಶೇಖರ್ ರೆಡ್ಡಿ ಹಾಗೂ ತಲ್ಲೂರಿನ ರವಿ ಯಾನೆ ಮೆಡಿಕಲ್ ರವಿ ಎಂದು ತಿಳಿದುಬಂದಿದೆ. ಇವರನ್ನು ಪೊಲೀಸರು ಮಡಿಕೇರಿಯಲ್ಲಿ ಬಂಧಿಸಿರುವುದಾಗಿ ಹೇಳಲಾಗಿದೆ. ಹರೀಶ್ ರೆಡ್ಡಿ ಸೇರಿದಂತೆ ಇನ್ನೂ ಆರು ಮಂದಿ ಆರೋಪಿಗಳನ್ನು ಇನ್ನಷ್ಟೇ ಬಂಧಿಸಬೇಕಿದೆ. ಮನೆಯೊಂದರ ಶೌಚಾಲಯದ ಪಿಟ್ ನಿರ್ಮಾಣದ ವೈಮನಸ್ಸಿನ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಹೇಳಲಾಗುತಿದ್ದರೂ, ಇಡೀ ಪ್ರಕರಣಕ್ಕೆ ಅನ್ಯ ಕಾರಣಗಳೂ ಇವೆ ಎಂಬುದು ತನಿಖೆ ಸಾಗಿರುವ ದಿಕ್ಕು ಸೂಚಿಸುತ್ತಿದೆ.
ಹರೀಶ್ ರೆಡ್ಡಿ ಸೇರಿದಂತೆ ಇನ್ನೂ ಆರು ಮಂದಿ ಆರೋಪಿಗಳನ್ನು ಇನ್ನಷ್ಟೇ ಬಂಧಿಸಬೇಕಿದೆ. ಮನೆಯೊಂದರ ಶೌಚಾಲಯದ ಪಿಟ್ ನಿರ್ಮಾಣದ ವೈಮನಸ್ಸಿನ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಹೇಳಲಾಗುತಿದ್ದರೂ, ಇಡೀ ಪ್ರಕರಣಕ್ಕೆ ಅನ್ಯ ಕಾರಣಗಳೂ ಇವೆ ಎಂಬುದು ತನಿಖೆ ಸಾಗಿರುವ ದಿಕ್ಕು ಸೂಚಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೋಟದ ಯುವ ರಾಜಕಾರಣಿ ಯೊಬ್ಬರನ್ನು ವಿಚಾರ ನಡೆಸಿದ್ದಾರೆ ಎಂದು ಮಾಹಿತಿಗಳಿದ್ದರೂ, ಪೊಲೀಸರು ಇದನ್ನು ಖಚಿತಪಡಿಸುತ್ತಿಲ್ಲ. ಹರೀಶ್ ರೆಡ್ಡಿಯ ಬಂಧನವಾದಾಗಲಷ್ಟೇ ಇಡೀ ಪ್ರಕರಣ ಸ್ಪಷ್ಟವಾಗಲಿದೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆಯನ್ನು ಬೀಸಲಾಗಿದೆ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.







