ವಿಶ್ವ ಮ್ಯಾರಥಾನ್ ಗೆದ್ದ ಸೂಸನ್ನಾ ಗಿಲ್
ಅಮೆರಿಕದ ಮೆಕ್‌ಗೆ ಪುರುಷ ವಿಭಾಗದ ಪ್ರಶಸ್ತಿ

ಮಿಯಾಮಿ(ಅಮೆರಿಕ), ಫೆ.7: ಏಳು ಖಂಡಗಳಲ್ಲಿ ವೈವಿಧ್ಯದ ಹವಾಮಾನ ಪರಿಸ್ಥಿತಿಯನ್ನು ಎದುರಿಸಿ 7 ದಿನಗಳಲ್ಲಿ 7 ರೇಸ್‌ಗಳನ್ನು ಪೂರ್ಣಗೊಳಿಸಿದ ಬ್ರಿಟಿಷ್ ಓಟಗಾರ್ತಿ ಸೂಸನ್ನ್ನಾ ಗಿಲ್ ವಿಶ್ವ ಮ್ಯಾರಥಾನ್ ಸ್ಪರ್ಧೆಯ ಮಹಿಳಾ ವಿಭಾಗದ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. 24 ತಾಸು, 19 ನಿಮಿಷ, 9 ಸೆಕೆಂಡ್‌ಗಳಲ್ಲಿ 295 ಕಿ.ಮೀ(183 ಮೈಲು) ದೂರವನ್ನು ಕ್ರಮಿಸಿದ ಅವರು, ದಿನವೊಂದರಲ್ಲಿ 5,000 ಕ್ಯಾಲರಿಗಳನ್ನು ಕರಗಿಸುತ್ತಿದ್ದರು.
34 ವರ್ಷದ ಸೂಸನ್ನಾ ಜ.31ರಂದು ಅಂಟಾರ್ಟಿಕಾದಿಂದ ಪ್ರಥಮ ಸುತ್ತಿನ ರೇಸ್ ಆರಂಭಿಸಿದ್ದರು. ಬುಧವಾರ 3:26:24ರ ಸಮಯದಲ್ಲಿ ಅವರು ಅಮೆರಿಕದ ಮಿಯಾಮಿಯಲ್ಲಿ ಫೈನಲ್ ಓಟವನ್ನು ಕೊನೆಗೊಳಿಸಿದರು.
7 ರೇಸ್‌ಗಳಿಗೆ 20:49:30 ಸಮಯ ಕಾಲಾವಧಿ ತೆಗೆದುಕೊಂಡ ಅಮೆರಿಕದ ಮೈಕ್ ವಾರ್ಡಿಯಾನ್ ಪುರುಷರ ವಿಭಾಗದ ಪ್ರಶಸ್ತಿಗೆ ಮುತ್ತಿಕ್ಕಿದರು. ಸ್ಪರ್ಧೆಯು ಜ.29ರಂದು ಕೇಪ್‌ಟೌನ್‌ನಲ್ಲಿ ಸಮಾವೇಶಗೊಂಡಿತ್ತು.
Next Story





