ಎರಡನೇ ಟ್ವೆಂಟಿ-20: ಭಾರತಕ್ಕೆ 7 ವಿಕೆಟ್ ಗಳ ಜಯ

ಆಕ್ಲೆಂಡ್, ಫೆ.8: ಇಲ್ಲಿ ನಡೆದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತ 7 ವಿಕೆಟ್ ಗಳ ಜಯ ಗಳಿಸಿದೆ.
ಗೆಲುವಿಗೆ 159 ರನ್ ಗಳ ಸವಾಲು ಪಡೆದ ಭಾರತ 18.5 ಓವರ್ ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 162 ರನ್ ಗಳಿಸಿತು.
ಹಂಗಾಮಿ ನಾಯಕ ರೋಹಿತ್ ಶರ್ಮಾ 50 ರನ್ (29ಎ, 3ನೌ,4ಸಿ), ಶಿಖರ್ ಧವನ್ 30 ರನ್, ರಿಷಭ್ ಪಂತ್ ಔಟಾಗದೆ 40 ರನ್, ವಿಜಯ್ ಶಂಕರ್ 40 ರನ್ ಮತ್ತು ಎಂಎಸ್ ಧೋನಿ ಔಟಾಗದೆ 20 ರನ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 158 ರನ್ ಗಳಿಸಿತ್ತು. ಗ್ರ್ಯಾಂಡ್ ಹೊಮ್ಮೆ 50 ರನ್ (28ಎ, 1ಬೌ,4ಸಿ) ಮತ್ತು ರಾಸ್ ಟೇಲರ್ 42 ರನ್ ಗಳಿಸಿದರು.
28ಕ್ಕೆ 3 ವಿಕೆಟ್ ಉಡಾಯಿಸಿದ ಕೃಣಾಲ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Next Story





