ಫೆ.10ರಂದು ಉಪ್ಪೂರಿನಲ್ಲಿ ಸಾಮೂಹಿಕ ಬ್ರಹ್ಮೋಪದೇಶ
ಉಡುಪಿ, ಫೆ.8: ಉಡುಪಿ ರಾಮಕ್ಷತ್ರಿಯ ಯುವ ಸಂಘದ ವತಿಯಿಂದ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮವನ್ನು ಫೆ.10ರಂದು ಉಪ್ಪೂರಿನ ರಾಮಕ್ಷತ್ರಿಯ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 9:33ಕ್ಕೆ ಪುರೋಹಿತ ಕೇಶವ ಭಟ್ ಮಾರ್ಗದರ್ಶನದಲ್ಲಿ ರಾಮ ಕ್ಷತ್ರಿಯ ಸಮಾಜದ ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ ಜರಗಲಿದೆ. ಬೆಳಗ್ಗೆ 11:30ರಂದು ನಡೆಯುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಕ್ಷತ್ರಿಯ ಯುವಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ ವಹಿಸಲಿ ರುವರು. ಶಾಸಕ ಕೆ. ರಘುಪತಿ ಭಟ್ ಭಾಗವಹಿಸಲಿರುವರು ಎಂದು ರಾಮ ಕ್ಷತ್ರಿಯ ವೆಲ್ಫೇರ್ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಕೆ.ಬಾಲಗಂಗಾಧರ ರಾವ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಮಕ್ಷತ್ರಿಯ ಯುವಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ, ಕಾರ್ಯದರ್ಶಿ ಎನ್.ಕೃಷ್ಣ ಉಪಸ್ಥಿತರಿದ್ದರು.
Next Story





