ಕೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆ ಸ್ವಾಗತಾರ್ಹ: ಎಸ್.ಪಿ.ಬರ್ಬೋಜ.
ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅಶ್ವಾಸನೆ ನೀಡಿದಂತೆ ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಕ್ರೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆ ಹಾಗೂ ಅದಕ್ಕಾಗಿ 200 ಕೋಟಿ ಅನುದಾನವನ್ನು ಈ ಬಜೆಟ್ ನಲ್ಲಿ ನೀಡಿದ್ದಾರೆ.
ಕ್ರೈಸ್ತ ಅಭಿವೃದ್ಧಿ ನಿಗಮ ಘೋಷಣೆಯ ಹಿಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯ ಕಾರ್ಯಧ್ಯಕ್ಷರಾದ ಎಂ.ಎಸ್ ನಾರಾಯಣ್ ರಾವ್, ಜೆಡಿಎಸ್ ನ ಕೈಸ್ತ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ ವಿಲ್ಸನ್ ರೆಡ್ಡಿ ಹಾಗೂ ಕೈಸ್ತ ಅಲ್ಪಸಂಖ್ಯಾತ ಘಟಕದ ಎಲ್ಲಾ ಪದಾಧಿಕಾರಿಗಳ ಶ್ರಮ ಮಹತ್ವದ್ದು ಆಗಿದೆ ಎಂದು ಜೆಡಿಎಸ್ ಕೈಸ್ತ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಎಸ್ .ಪಿ.ಬರ್ಬೋಜ ತಿಳಿಸಿದ್ದಾರೆ.
Next Story





