ಕೇಜ್ರಿವಾಲ್ ಸಂಚರಿಸುತ್ತಿದ್ದ ಕಾರಿನ ಮೇಲೆ 100 ಮಂದಿಯ ತಂಡದಿಂದ ದಾಳಿ
ಬಿಜೆಪಿ ಕಾರ್ಯಕರ್ತರ ಕೃತ್ಯ: ಆರೋಪ
ಹೊಸದಿಲ್ಲಿ, ಫೆ.8: ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಂಚರಿಸುತ್ತಿದ್ದ ಕಾರಿನ ಮೇಲೆ ಸುಮಾರು 100 ಮಂದಿಯ ತಂಡ ದಾಳಿ ನಡೆಸಿದ ಘಟನೆ ನಡೆದಿದೆ. ದಾಳಿ ನಡೆಸಿದವರು ಬಿಜೆಪಿ ಕಾರ್ಯಕರ್ತರು ಎಂದು ಆರೋಪಿಸಲಾಗಿದೆ.
ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ತೆರಳಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದವರು ಬಿಜೆಪಿ ಕಾರ್ಯಕರ್ತರು ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ವಾಹನದ ಮಿರರ್ ಗೆ ಹಾನಿಯಾಗಿದ್ದು, ಕೇಜ್ರಿವಾಲ್ ಮೇಲಿನ ಹಲ್ಲೆಯನ್ನು ಭದ್ರತಾ ಸಿಬ್ಬಂದಿ ತಡೆದಿದ್ದಾರೆ ಎಂದು ಅದು ಹೇಳಿದೆ.
This is a proof that Delhi CM @ArvindKejriwal was attacked by the goons of @BJP4India
— AAP (@AamAadmiParty) February 8, 2019
Can @DelhiPolice please tell us when these goons will be arrested? pic.twitter.com/QqSoVRva1n
Next Story