ರಾಜ್ಯದಲ್ಲಿ ಶಿಕ್ಷಣ ಸಚಿವರನ್ನು ನೇಮಿಸಲು ಸಿಎಫ್‌ಐ ಆಗ್ರಹ
ಮಂಗಳೂರು, ಫೆ.8: ರಾಜ್ಯದಲ್ಲಿ ಶಿಕ್ಷಣ ಸಚಿವರನ್ನು ನೇಮಿಸದೆ ಎಚ್.ಡಿ.ಕುಮಾರ್ ಸ್ವಾಮಿ ಬಜೆಟ್ ಮಂಡಿಸಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಕ್ಯಾಂಫಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡ ಪ್ರತಿಭಟನೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಫ್‌ಐನ ಜಿಲ್ಲಾಧ್ಯಕ್ಷ ಮುಹಮ್ಮದ್ ಸಾದಿಕ್ ಮಾತನಾಡುತ್ತಾ, ಈ ಬಾರಿಯ ಬಜೆಟ್ ಮಂಡನೆಗೆ ಮೊದಲು ಶಿಕ್ಷಣ ಸಚಿವರನ್ನು ಸರಕಾರ ನೇಮಿಸಬೇಕಿತ್ತು. ಶೀಘ್ರವಾಗಿ ಶಿಕ್ಷಣ ಸಚಿವರನ್ನು ನೇಮಿಸಬೇಕು ಬಜೆಟ್‌ನಲ್ಲಿ ಕೊಠಾರಿ ಆಯೋಗದ ಗರಿಷ್ಠ ಅನುದಾನವನ್ನು ಮೀಸಲಿಡಬೇಕು. ರಾಜ್ಯದ ಉರ್ದು ಶಾಲೆಗಳಿಗೆ ಅನುದಾನ ನೀಡಬೇಕು. ವೈದ್ಯಕೀಯ ಶಿಕ್ಷಣಕ್ಕೆ ಬೇಡಿಕೆ ಇರುವ ದಕ್ಷಿಣ ಕನ್ನಡದಲ್ಲಿ ಸುಸಜ್ಜಿತ ವೈದ್ಯಕೀಯ ಶಿಕ್ಷಣ ಕಾಲೇಜನ್ನು ಆರಂಭಿಸಬೇಕು, ಸರಕಾರಿ ಶಾಲೆಗಳಲ್ಲಿ ಒಂದನೆ ತರಗತಿಯಿಂದ ಆಂಗ್ಲ ಭಾಷೆಯನ್ನು ಕಲಿಸಲು ಒತ್ತು ನೀಡಬೇಕು ಎಂದು ಪ್ರತಿಭಟನಾ ಸಭೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.





