ಹತ್ತನೇ ಮೈಲಿನಲ್ಲಿ ತ್ವಾಹಾ ನೂತನ ಮಸೀದಿ ಉದ್ಗಾಟನೆ, ಖಾಝಿ ಸ್ವೀಕಾರ

ಫರಂಗಿಪೇಟೆ, ಫೆ. 8: ತಾಲೂಕಿನ ಪುದು ಗ್ರಾಮದ ಹತ್ತನೇ ಮೈಲ್ ಕಲ್ಲು ಎಂಬಲ್ಲಿ ತ್ವಾಹಾ ಜುಮಾ ಮಸೀದಿ ಉದ್ಘಾಟನೆ, ಖಾಝಿ ಸ್ವೀಕಾರಗೊಂಡಿದೆ.
ದಕ ಜಿಲ್ಲಾ ಖಾಝಿ ತ್ವಾಖಾ ಅಹಮದ್ ಮುಸ್ಲಿಯಾರ್ ಮಸೀದಿಯ ಪ್ರಥಮ ಜುಮಾ ಖುತುಬ ಪಾರಾಯಣ ಮಾಡಿ ಉದ್ಘಾಟಿಸಿದರು.
ಪಾಣಕ್ಕಾಡ್ ಸೆಯ್ಯದ್ ರಶೀದ್ ಅಲಿ ಸಿಹಾಬ್ ತಂಙಳ್ ಜುಮಾ ನಮಾಝ್ ಗೆ ನೇತೃತ್ವ ವಹಿಸಿದರು. ಫರಂಗಿಪೇಟೆ ಮಸೀದಿ ಖತೀಬ್ ಅಬ್ಬಾಸ್ ದಾರಿಮಿ, ಅಮೆಮಾರ್ ಮಸೀದಿ ಖತೀಬ್ ಅಬೂಸ್ವಾಲಿಹ್ ಪೈಝಿ, ಮಾರಿಪ್ಪಳ್ಳ ಮಸೀದಿ ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ಫರಂಗಿಪೇಟೆ ಮಸೀದಿ ಅಧ್ಯಕ್ಷ ಮುಹಮ್ಮದ್ ಬಾವ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪ್ಪಳ್ಳ ಹಾಗೂ ಮಸೀದಿ ಆಡಳಿತ ಸಮಿತಿ ಪದಾಧಿಕಾರಿಗಳು ಸದಸ್ಯರು ಮತ್ತು ನಶಾತುದ್ದೀನ್ ಯಂಗ್ ಫೆಡರೇಶನ್ ಸಮಿತಿ ಸದಸ್ಯರು, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story





