ಲಾರಿ ಢಿಕ್ಕಿ: ಬೈಕ್ ಸವಾರ ಮೃತ್ಯು
ಕುಂದಾಪುರ, ಫೆ.8: ಇನ್ಸುಲೇಟರ್ ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಹಂಗಳೂರು ಗ್ರಾಮದ ಬಾಷಾ ಟ್ರಾನ್ಸ್‌ಪೋರ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ಫೆ.7 ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಕೋಟೇಶ್ವರ ಮಾರ್ಕೊಡು ನಿವಾಸಿ ವಿವೇಕಾನಂದ(42) ಎಂದು ಗುರುತಿಸಲಾಗಿದೆ.
ಕುಂದಾಪುರ ಕಡೆಯಿಂದ ಕೋಟೇಶ್ವರ ಕಡೆ ಹೋಗುತ್ತಿದ್ದ ಲಾರಿಯು ಎದುರಿನಿಂದ ಹೋಗುತ್ತಿದ್ದ ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆಯಿ ತ್ತೆನ್ನಲಾಗಿದೆ. ಇದರಿಂದ ರಸ್ತೆ ಬಿದ್ದ ವಿವೇಕಾನಂದರ ತಲೆಯ ಮೇಲೆ ಲಾರಿಯ ಚಕ್ರ ಹಾದು ಹೊಯಿತು. ಇದರಿಂದ ಗಂಭೀರವಾಗಿ ಗಾಯ ಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು.ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





