ಅಕ್ರಮ ಗಾಂಜಾ ಸಾಗಾಟ: ಆರೋಪಿ ಸೆರೆ
ಪುತ್ತೂರು, ಫೆ. 8: ರಿಕ್ಷಾವೊಂದರಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಶುಕ್ರವಾರ ಪತ್ತೆ ಹಚ್ಚಿದ ಪೋಲೀಸರು ಆರೋಪಿ ಯನ್ನು ಬಂಧಿಸಿ, ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಟ್ವಾಳ ತಾಲೂಕಿನ ಸೂರಿಕುಮೇರು ನಿವಾಸಿ ಅಬ್ದುಲ್ ಸಮದ್ (25) ಬಂಧಿತ ಆರೋಪಿ.
ಆತ ಪುತ್ತೂರು ನಗರದ ದರ್ಬೆ ಕಾವೇರಿಕಟ್ಟೆ ಎಂಬಲ್ಲಿ ತನ್ನ ರಿಕ್ಷಾದಲ್ಲಿ ಗಾಂಜಾ ಸಾಗಾಟ ನಡೆಸುತ್ತಿದ್ದ ವೇಳೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನಿಂದ ಆಟೋ ರಿಕ್ಷಾದ ಹಿಂಬದಿ ಸೀಟ್‍ನ ಬಳಿ ಬಟ್ಟೆಯಲ್ಲಿ ಸುತ್ತಿಟ್ಟಿದ್ದ 70 ಗ್ರಾಮ್ 14 ಪ್ಯಾಕೆಟ್ ಗಾಂಜಾ ಪತ್ತೆ ಹಚ್ಚಲಾಗಿದೆ. ವಶಪಡಿಸಿಕೊಳ್ಳಲಾದ ಗಾಂಜಾದ ಮೌಲ್ಯ ರೂ. 7 ಸಾವಿರ ಎಂದು ಅಂದಾಜಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಮ್.ಲಕ್ಷ್ಮೀಪ್ರಸಾದ್ ಮತ್ತು ಡಿವೈಎಸ್ಪಿ ದಿನಕರ್ ಶೆಟ್ಟಿಯವರ ಮಾರ್ಗದರ್ಶನದಂತೆ ಪುತ್ತೂರು ನಗರ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಅವರ ನಿರ್ದೇಶನದಲ್ಲಿ ಎಸ್.ಐ ರುಕ್ಮಯ ಮೂಲ್ಯ ಮತ್ತು ಸಿಬಂದಿಗಳು ಕಾರ್ಯಾಚರಣೆ ನಡೆಸಿದ್ದರು.
ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.





