ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ ಪರೀಕ್ಷೆ: ಆಳ್ವಾಸ್‍ಗೆ 289 ರ್ಯಾಂಕ್

ಮೂಡುಬಿದಿರೆ, ಫೆ. 8: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಫಲಿತಾಂಶ ಪ್ರಕಟಗೊಂಡಿದ್ದು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 289 ರ್ಯಾಂಕ್ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಆಯುರ್ವೇದಲ್ಲಿ 64, ಹೋಮಿಯೋಪಥಿಯಲ್ಲಿ 45, ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನದಲ್ಲಿ 159, ಫಿಸಿಯೋಥೆರಫಿಯಲ್ಲಿ 6, ಹಾಸ್ಪಿಟಲ್ ಅಡ್ಮಿನಿಷ್ಟ್ರೇಶನ್‍ನಲ್ಲಿ 8 ಹಾಗೂ ನರ್ಸಿಂಗ್‍ನಲ್ಲಿ 7 ರ್ಯಾಂಕ್‍ಗಳನ್ನು ಗಳಿಸುವ ಮೂಲಕ ಆಳ್ವಾಸ್ ನೂತನ ಮೈಲಿಗಲ್ಲು ಸ್ಥಾಪಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆಯುರ್ವೇದ ಪದವಿ ವಿಭಾಗದಲ್ಲಿ 55 ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ 9 ರ್ಯಾಂಕ್ ಗಳಿಸಿದೆ. ಪದವಿ ವಿಭಾಗದಲ್ಲಿ ಸಮಗ್ರ 2 ರ್ಯಾಂಕ್, ವಾರ್ಷಿಕ 5 ರ್ಯಾಂಕ್, ವಿಷಯವಾರು 48 ರ್ಯಾಂಕ್‍ಗಳು ಲಭಿಸಿದೆ. ಸಮಗ್ರ ರ್ಯಾಂಕ್‍ನಲ್ಲಿ ನಾಝ್ 6ನೇ ರ್ಯಾಂಕ್, ಶ್ರೇಯಾ ಶ್ರೀಧರ್ 8ನೇ ರ್ಯಾಂಕ್ ಪಡೆದಿದ್ದಾರೆ. ವಾರ್ಷಿಕ ರ್ಯಾಂಕ್‍ನಲ್ಲಿ ಶ್ರೇಯಾ ಶ್ರೀಧರ್ 3ನೇ, ಅಶ್ವಿನಿ ಪಿ.ಕೆ 5ನೇ ರ್ಯಾಂಕ್ ಗಳಿಸಿದ್ದಾರೆ.
ಹೋಮಿಯೋಪಥಿ ಒಟ್ಟು 45 ರ್ಯಾಂಕ್
ಹೋಮಿಯೋಪಥಿಯಲ್ಲಿ ಸಮಗ್ರ 1 ರ್ಯಾಂಕ್, ವಾರ್ಷಿಕ 3 ರ್ಯಾಂಕ್, ವಿಷಯವಾರು 41 ರ್ಯಾಂಕ್ ಲಭಿಸಿದೆ. ಸಮಗ್ರ ರ್ಯಾಂಕ್‍ನಲ್ಲಿ ಕೃತಿ ಪಿ. 10ನೇ ರ್ಯಾಂಕ್, ವಾರ್ಷಿಕ ರ್ಯಾಂಕ್‍ನಲ್ಲಿ 5ನೇ ರ್ಯಾಂಕ್, ವಾರ್ಷಿಕ ರ್ಯಾಂಕ್‍ನಲ್ಲಿ ಅಮೃತವರ್ಷಿಣಿ(ತೃತೀಯ ಬಿಎಚ್‍ಎಂಎಸ್) ವಾರ್ಷಿಕ ರ್ಯಾಂಕ್‍ನಲ್ಲಿ 7ನೇ ರ್ಯಾಂಕ್, ಅಮೃತವರ್ಷಿಣಿ( ದ್ವಿತೀಯ ಬಿಎಚ್‍ಎಂಎಸ್) 8ನೇ ರ್ಯಾಂಕ್ ಪಡೆದಿದ್ದಾರೆ.
ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನದಲ್ಲಿ 159 ರ್ಯಾಂಕ್ ಗಳಿಸಿದ್ದು, ಅದರಲ್ಲಿ ಸಮಗ್ರ 3, ವಾರ್ಷಿಕ 14 ಹಾಗೂ ವಿಷಯವಾರು 142 ರ್ಯಾಂಕ್ ಲಭಿಸಿದೆ. ಸಮಗ್ರ ರ್ಯಾಂಕ್ ವಿಭಾಗದಲ್ಲಿ ಶ್ವೇತಾ ನಾರಾಯಣ್ ಪ್ರಥಮ, ಅನಾಮಿಕಾ ರಘುವಂಶಿ ದ್ವಿತೀಯ ರ್ಯಾಂಕ್, ಪೂರ್ವಿ ಭಟ್ 4ನೇ ರ್ಯಾಂಕ್ ಪಡೆದಿದ್ದಾರೆ.
ನರ್ಸಿಂಗ್‍ನಲ್ಲಿ ವಿಷಯವಾರು 7 ರ್ಯಾಂಕ್ , ಫಿಸಿಯೋಥೆರಫಿಯಲ್ಲಿ ವಿಷಯವಾರು 6 ರ್ಯಾಂಕ್ ಹಾಗೂ ಹಾಸ್ಪಿಟಲ್ ಅಡ್ಮಿನಿಷ್ಟ್ರೇಶನ್ 8 ರ್ಯಾಂಕ್ ಆಳ್ವಾಸ್‍ಗೆ ಲಭಿಸಿದೆ ಎಂದು ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ.
ಆಳ್ವಾಸ್ ಪಿಆರ್‍ಒ ಡಾ.ಪದ್ಮನಾಭ ಶೆಣೈ, ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಯತಿಕುಮಾರ ಸ್ವಾಮಿ ಗೌಡ, ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಡಾ.ವನಿತಾ ಶೆಟ್ಟಿ, ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಅಸಿಸ್ಟೆಂಟ್ ಅಡ್ಮಿಸ್ರೆಟಿವ್ ಅಧಿಕಾರಿ ಡಾ. ಪ್ರಜ್ಞಾ ಆಳ್ವ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







