ಫೆ.10: ಕೊರಗ ಸಮುದಾಯದ ಸಾಮೂಹಿಕ ವಿವಾಹ
ಮಂಗಳೂರು, ಫೆ . 8: ಕೊರಗರ ಸಾಮೂಹಿಕ ವಿವಾಹ ಕಾರ್ಯಕ್ರಮ ಫೆ. 10ರಂದು ರವಿವಾರ ಕೊಡಿಕಲ್ ಕುದ್ಮುಲ್ ರಂಗರಾವ್ ಕೊರಗ ಸಮುದಾಯ ಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಗೂ ಕಾಸರಗೊಡು ಜಿಲ್ಲೆಗಳ ಹದಿನೈದು ಜೋಡಿ ಕೊರಗ ಸಮುದಾಯದ ಯುವಜನರು ಈ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ವಿವಾಹ ಕಾರ್ಯಕ್ರಮ ಕೊರಗ ಸಮುದಾಯದ ಗುರಿಕಾರರು ಮತ್ತು ಹೆತ್ತವರ ನೇತೃತ್ವದಲ್ಲಿ ನಡೆಯಲಿದೆ.ಬೆಳಗ್ಗೆ ಒಂಭತ್ತು ಗಂಟೆಗೆ ದಿಬ್ಬಣ ಎದುರು ಗೊಳ್ಳುವುದರೊಂದಿಗೆ ಆರಂಭಗೊಂಡು ಸಂಜೆ ಮೂರು ಗಂಟೆಗೆ ಮದುಮಕ್ಕಳನ್ನು ಬೀಳ್ಕೋಡುವವರೆಗಿನ ಕಾರ್ಯಕ್ರಮಗಳು ಕೊರಗ ಸಮುದಾಯದ ಸಂಪ್ರದಾಯ ಕಟ್ಟು ಕಟ್ಟಳೆಯಂತೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





