ಮೂರನೇ ಬಾರಿ ಈ.ಡಿ ವಿಚಾರಣೆಗೆ ಹಾಜರಾದ ರಾಬರ್ಟ್ ವಾದ್ರಾ
ಹೊಸದಿಲ್ಲಿ, ಫೆ.9: ವಿದೇಶದಲ್ಲಿ ಆಸ್ತಿ ಖರೀದಿ ಮಾಡುವುದರೊಂದಿಗೆ ಕಪ್ಪು ಹಣ ಬಿಳಿ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇಡಿ)ಶನಿವಾರ ಮೂರನೇ ಬಾರಿ ರಾಬರ್ಟ್ ವಾದ್ರಾರ ವಿಚಾರಣೆ ನಡೆಸಿದೆ.
ವಾದ್ರಾ ಶನಿವಾರ ಬೆಳಗ್ಗೆ 10:45 ಸುಮಾರಿಗೆ ಖಾಸಗಿ ವಾಹನದಲ್ಲಿ ಕೇಂದ್ರ ದಿಲ್ಲಿಯಲ್ಲಿರುವ ಜಾಮನ್ನಗರ ಹೌಸ್ನಲ್ಲಿರುವ ಇಡಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾದರು. ಫೆ.6 ಹಾಗೂ 7 ರಂದು ವಾದ್ರಾರನ್ನು ವಿಚಾರಣೆ ನಡೆಸಿರುವ ಪ್ರಕರಣದ ತನಿಖಾಧಿಕಾರಿಗಳು ಮತ್ತಷ್ಟು ಪ್ರಶ್ನೆಗಳನ್ನು ಕೇಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾದ್ರಾರನ್ನು ಮೊದಲ ದಿನ ವಿಚಾರಣೆ ವೇಳೆ ಐದೂವರೆ ಗಂಟೆ ಪ್ರಶ್ನಿಸಿದ್ದ ಇಡಿ ಅಧಿಕಾರಿಗಳು ಮರುದಿನ ಸುಮಾರು 9 ಗಂಟೆ ಕಾಲ ವಿಚಾರಣೆ ನಡೆಸಿದ್ದಾರೆ.
ಇತ್ತೀಚೆಗೆ ಉತ್ತರಪ್ರದೇಶ ಪೂರ್ವದ ಉಸ್ತುವಾರಿಯೊಂದಿಗೆ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಪ್ರಿಯಾಂಕಾ ಗಾಂಧಿ ತನ್ನ ಪತಿ ವಾದ್ರಾರನ್ನು ಮೊದಲ ದಿನದ ವಿಚಾರಣೆಗೆ ಹಾಜರಾಗಲು ತನ್ನ ಕಾರಿನಲ್ಲಿ ಇಡಿ ಕಚೇರಿಗೆ ಡ್ರಾಪ್ ಮಾಡಿದ್ದರು.