ಫೆ.10ರಿಂದ ಅಂಬಲಪಾಡಿ ಸನಿವಾಸ ಶಿಬಿರ
ಉಡುಪಿ, ಫೆ.9: ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಘಟಕ ಕಳೆದ ಎಂಟು ವರ್ಷಗಳಿಂದ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್ ಫಲಾನುಭವಿಗಳಿಗೆ ಐದು ದಿನಗಳ ನಡೆಸುವ ಸನಿವಾಸ ಶಿಬಿರ ಈ ಬಾರಿ ಫೆ.10ರಿಂದ 14ರವರೆಗೆ ನಡೆಯಲಿದೆ.
ಜಿ.ಎಂ.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಇದರ ಅಧ್ಯಕ್ಷ ಪ್ರಕಾಶ್‌ಚಂದ್ರ ಶೆಟ್ಟಿ, ಹಿರಿಯಡ್ಕದ ಉದ್ಯಮಿ ಪಿ. ನಟರಾಜ್ ಹೆಗಡೆ, ಬ್ರಹ್ಮಾವರ ವ್ಯವಸಾಯ ಸಂಘದ ನಿರ್ದೇಶಕ ಬಿರ್ತಿ ರಾಜೇಶ್ ಶೆಟ್ಟಿ ಅತಿಥಿಗಳಾಗಿರುವರು.
ಹುಬ್ಬಳ್ಳಿಯ ಮೈಲೈಫ್ ಸಂಸ್ಥೆಯ ಪ್ರವೀಣ್ ಗುಡಿ ನಿರ್ದೇಶನದಲ್ಲಿ ಐವರು ಸಂಪನ್ಮೂಲ ವ್ಯಕ್ತಿಗಳ ತಂಡ ಶಿಬಿರವನ್ನು ನಡೆಸಿಕೊಡಲಿವೆ. ಶಿಬಿರದಲ್ಲಿ ಆಂಗ್ಲ ಭಾಷಾ ಕೌಶಲ, ಸಂವಹನ ಕೌಶಲ, ನಾಯಕತ್ವ, ವೃತ್ತಿ ಮಾರ್ಗದರ್ಶನ, ಸಮೂಹ ಸಹಭಾಗಿತ್ವ, ಸಮಾಜಮುಖಿ ಚಿಂತನೆ, ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಕೆ. ಗಣೇಶ್ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





