ಲಾರಿ ಢಿಕ್ಕಿ: ಯುವಕ ಮೃತ್ಯು

ಬೆಂಗಳೂರು, ಫೆ.9: ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ಇಲ್ಲಿನ ಕೆಆರ್‌ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹಾರಾಷ್ಟ್ರ ಮೂಲದ ಶಬೀರ್ ಖಾನ್(27) ಮೃತ ಯುವಕನಾಗಿದ್ದು, ವೃತ್ತಿಯಲ್ಲಿ ಚಾಲಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಬಣ್ಣದ ಡಬ್ಬಗಳನ್ನು ಲಾರಿಯಲ್ಲಿ ತುಂಬಿಕೊಂಡು ಬಂದಿದ್ದ ಚಾಲಕ ಶಬೀರ್ ಖಾನ್, ಶುಕ್ರವಾರ ರಾತ್ರಿ 8ರ ವೇಳೆ ಬಣ್ಣದ ಡಬ್ಬಗಳನ್ನು ಇಳಿಸಲು ಸಾಧ್ಯವಿಲ್ಲದಿದ್ದರಿಂದ ಲಾರಿ ನಿಲ್ಲಿಸಿಕೊಂಡಿದ್ದರು.
ಈ ವೇಳೆ ಮಹಾರಾಷ್ಟ್ರದಿಂದ ಬಣ್ಣ ತುಂಬಿಕೊಂಡ ಮತ್ತೊಂದು ಲಾರಿ, ಬಂದಿದ್ದು, ಅದನ್ನು ನಿಲ್ಲಿಸಲು ಶಬೀರ್‌ಖಾನ್ ದಾರಿ ತೋರಿಸುತ್ತಿದ್ದಾಗ ಹಿಂಬದಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಕಲೀಮುಲ್ಲಾ ಎಂಬಾತನನ್ನು ಕೆಆರ್ ಪುರಂ ಸಂಚಾರ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
Next Story





