ಸಾಲಿಹಾತ್ ವಿದ್ಯಾಥಿಗರ್ಳಿಂದ ಹಿರಿಯಡ್ಕ ಕಾರಾಗೃಹ ಭೇಟಿ

ಉಡುಪಿ, ಫೆ.9: ತೋನ್ಸೆ ಹೂಡೆಯ ಸಾಲಿಹಾತ್ ಪ್ರೌಢಶಾಲಾ ವಿದ್ಯಾರ್ಥಿ ಗಳು ಶುಕ್ರವಾರ ಹಿರಿಯಡ್ಕದಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದರು.
ಈ ಸಂದರ್ಭ ಅಪರಾಧ ಕೃತ್ಯ ಎಸಗಿದರೆ ಅನುಭವಿಸುವ ಶಿಕ್ಷೆಯ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಂಡರು. ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿದ ಶಾಲಾ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಕಾರಾಗೃಹದಲ್ಲಿ ಒಟ್ಟು 117 ಮಂದಿ ಆರೋಪಿಗಳಿದ್ದು, ಇದರಲ್ಲಿ ಬಹುತೇಕ ಮಂದಿ 20 ರಿಂದ 30 ವರ್ಷದ ಒಳಗಿನ ಯುವಕರು ಆಗಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಕುರಿತು ವಿದ್ಯಾರ್ಥಿಗಳು ಜಾಗೃತರಾಗಬೇಕು. ಯಾವುದೇ ಅಪರಾಧ ಎಸೆಗದಂತೆ ಕಾನೂನಿನ ಜ್ಞಾನವನ್ನು ಹೊಂದಿರಬೇಕು. ಅಪರಾಧ ಕೃತ್ಯಗಳು ತಮ್ಮ ಜೀವನವನ್ನೇ ನಾಶಮಾಡುತ್ತದೆ. ಈ ಹಿನ್ನಲೆಯಲ್ಲಿ ಶಾಲಾ ಹಂತದಲ್ಲಿ ಯೇ ಈ ಕುರಿತ ಜ್ಞಾನ ವಿದ್ಯಾರ್ಥಿಗಳಿಗೆ ನೀಡಿದರೆ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.
Next Story





