ಬಜ್ಪೆಯಲ್ಲಿ ಕಾಣಿಸಿಕೊಂಡ ಚಿರತೆ

ಮಂಗಳೂರು, ಫೆ.9: ಬಜ್ಪೆ ಸಮೀಪದ ಸೌಹಾರ್ದ ನಗರದಲ್ಲಿ ಶನಿವಾರ ಮುಸ್ಸಂಜೆಯ ವೇಳೆಗೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರು ತೀವ್ರ ಆತಂಕಿರಾಗಿದ್ದಾರೆ.
ಶನಿವಾರ ಮುಸ್ಸಂಜೆ ಸುಮಾರು 6:30ರ ವೇಳೆಗೆ ಇಲ್ಲಿನ ಹಟ್ಟಿಯೊಂದಕ್ಕೆ ನುಗ್ಗಿದ ಚಿರತೆ ಆಡೊಂದನ್ನು ಬಲಿಪಡೆದುಕೊಂಡಿದೆ. ಈ ಬಗ್ಗೆ ಮಾಹಿತಿ ಪಡೆದ ಮನೆಯವರು ತಕ್ಷಣ ಸ್ಥಳೀಯರ ಗಮನ ಸೆಳೆದಿದ್ದು ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಸೆರೆಗೆ ಪ್ರಯತ್ನ ಸಾಗಿಸಿದೆ. ಇದೀಗ ಚಿರತೆಯು ಪೊದೆಯೊಂದರಲ್ಲಿ ಅಡಗಿ ಕೂತಿದೆ ಎಂದು ಸ್ಥಳೀಯ ಮಸೀದಿಯ ಅಧ್ಯಕ್ಷ ಸಾಲಿ ಮರವೂರು ತಿಳಿಸಿದ್ದಾರೆ.









