Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಬುಡಬುಡಿಕೆ
  4. ಮಾಲ್ ರೆಡಿ ಸಾರ್...ಯಾವ ರೆಸಾರ್ಟಿಗೆ...

ಮಾಲ್ ರೆಡಿ ಸಾರ್...ಯಾವ ರೆಸಾರ್ಟಿಗೆ ಬರಲಿ?

*ಚೇಳಯ್ಯ chelayya@gmail.com*ಚೇಳಯ್ಯ chelayya@gmail.com10 Feb 2019 12:24 AM IST
share
ಮಾಲ್ ರೆಡಿ ಸಾರ್...ಯಾವ ರೆಸಾರ್ಟಿಗೆ ಬರಲಿ?

ಶಾಸಕ ಗುಳ್ಳಪ್ಪನ ಮೊಬೈಲ್‌ಗೆ ಫೋನ್ ರಿಂಗಣಿಸಿತು.
‘‘ಸಾರ್...ತಮ್ಮ ರೇಟೆಷ್ಟು....’’ ಅತ್ತ ಕಡೆಯಿಂದ ಕರೆ.
‘‘ಯಾರದು? ಯಾರು ಮಾತನಾಡ್ತಾ ಇರುವುದು?’’ ಗುಳ್ಳಪ್ಪ ಕೇಳಿದ.
‘‘ಏ ಧ್ವನಿ ನೋಡಿದರೆ ಗೊತ್ತಾಗುವುದಿಲ್ಲವೇನ್ರೀ....?’’ ಅತ್ತ ಕಡೆಯಿಂದ.
ಗುಳ್ಳ ಈಗ ನವಿರಾಗಿ ಕಂಪಿಸಿದ. ಯಡಿಯೂರಪ್ಪನ ಧ್ವನಿ ಇದ್ದ ಹಾಗಿದೆ. ಹೇಗೂ ಸರಕಾರದಲ್ಲಿ ಸಚಿವ ಸ್ಥಾನ ಬಿಡಿ, ನಿಗಮ ಮಂಡಳಿಯೂ ಸಿಗಲಿಲ್ಲ. ಗಂಟಲು ಸರಿಪಡಿಸಿದವನೇ ‘‘ನೋಡಿ ಸಾರ್...ನೀವೇ ಒಂದು ಅಂದಾಜು ದರ ಫಿಕ್ಸ್ ಮಾಡಿ....’’
‘‘ಅದು ಹೇಗಾಗತ್ತೆ? ನಾಳೆ ನೀವು ಕಡಿಮೆ ಆಯಿತು ಎಂದು ಹೇಳಬಾರದಲ್ವ? ನೀವೇ ಹೇಳಿ...’’ ಅತ್ತ ಕಡೆಯಿಂದ ಯಡಿಯೂರಪ್ಪ ಧ್ವನಿ.
ಗುಳ್ಳಪ್ಪನಿಗೆ ಕಸಿವಿಸಿ. ಒಂದು ಹತ್ತು ಕೋಟಿ ಕೇಳೋಣ ಎನ್ನುವ ಆಸೆ. ಒಂದು ವೇಳೆ ಯಡಿಯೂರಪ್ಪ ಅವರು 20 ಕೋಟಿ ಕೊಡಲು ತಯಾರಿದ್ದರೆ?
‘‘ಸಾರ್...ಆದ್ರೂ ಸದ್ಯ ನಿಮ್ಮ ಮಾರ್ಕೆಟ್‌ನಲ್ಲಿ ರೇಟು ಹೇಗಿದೆ....ನೀವು ಈಗಾಗಲೇ ಖರೀದಿಸಿದ ದರ ಹೇಳಿ....ನಾನು ಹೆಚ್ಚು ಕಡಿಮೆ ಮಾಡುವೆ....’’ ಗುಳ್ಳಪ ಮೆಲ್ಲಗೆ ಚೌಕಾಶಿ ಮಾಡಿದ.
‘‘ನಿಮಗೇನೂ ಗೊತ್ತಿಲ್ಲದ ವಿಷಯವೇ? ಪೇಪರ್‌ನಲ್ಲಿ ಓದುವುದಿಲ್ಲವೆ? ಹೇಳಿ ಹೇಳಿ...ವ್ಯಾಪಾರ ಬೇಗ ಮುಗಿಯಬೇಕು....ಬಜೆಟ್ ಮುಗಿಯುವ ಮುನ್ನ...’’
‘‘ಸಾರ್....ನೀವೇ ಹೇಳಿ ಸಾರ್....ನೋಡಿ....ನನ್ನ ಜಾತಿ ನಿಮಗೆ ಗೊತ್ತೇ ಇದೆ...ನಮ್ಮ ಜಾತಿಗೆ ತುಂಬಾ ಡಿಮಾಂಡ್....’’ ಗುಳ್ಳಪ್ಪ ಹೇಳಿದ.
‘‘ಅದು ಗೊತ್ತು. ನಿಮ್ಮ ಜಾತಿಯನ್ನು ನೋಡಿಯೇ ಕೇಳ್ತಾ ಇರುವುದು....ನಿಮ್ಮ ಜಾತಿ ಮಾರ್ಕೆಟ್‌ನಲ್ಲಿ ಬಹಳ ಕಡಿಮೆ....’’
ಗುಳ್ಳಪ್ಪನಿಗೆ ಅದು ಕೇಳಿ ಖುಷಿ ಖುಷಿಯಾಯಿತು.
‘‘ಸರಿ...ಒಂದು 200 ಕೊಡ್ತೇವೆ...’’ ಅತ್ತ ಕಡೆಯಿಂದ ದರ ನಿಗದಿಯಾಯಿತು. ಗುಳ್ಳಪ್ಪರಿಗೆ ತಲೆ ಗಿರ್ ಅನ್ನಿಸಿತು. 200 ಕೋಟಿ ರೂಪಾಯಿ...!! ಎರಡು ಪೀಳಿಗೆ ಕುಳಿತು ಉಣ್ಣಬಹುದು.
‘‘ಅಯ್ಯೋ....ಆಗಬಹುದು ಸಾರ್...ದುಡ್ಡು ಹೇಗೆ ತಲುಪಿಸುತ್ತೀರಿ.....?’’ ಗುಳ್ಳಪ್ಪ ಕೇಳಿದ.
‘‘ಮೊದಲು ಮಾಲ್ ಬರಬೇಕು....ಕ್ಯಾಶ್ ಕೈಯಲ್ಲೇ ಕೊಡುತ್ತೇವೆ....’’ ಅತ್ತಲಿಂದ ಸೂಚನೆ ಸಿಕ್ಕಿತು.
‘‘ಮಾಲ್ ರೆಡಿ ಸಾರ್...ಯಾವ ರೆಸಾರ್ಟ್‌ಗೆ ಬರಬೇಕು ಹೇಳಿ. ಬಂದು ಬಿದ್ದುಕೊಳ್ತೇನೆ. ಹೊತ್ತು ಹೊತ್ತಿಗೆ ಗುಂಡು ತುಂಡು ಹಾಕಿದರೆ ಸಾಕು....’’
ಅತ್ತ ಕಡೆಯಿಂದ ಧ್ವನಿ ಒಮ್ಮೆಲೆ ಜೋರಾಯಿತು ‘‘ರೆಸಾರ್ಟ್ ...ಯಾವ ರೆಸಾರ್ಟ್....? ನೇರವಾಗಿ ಮಾರ್ಕೆಟ್‌ಗೆ ಬನ್ನಿ....’’
ಶಾಸಕರನ್ನು ಖರೀದಿಸುವ ಮಾರ್ಕೆಟ್ ಇದೆಯೇ? ‘‘ಸಾರ್ ಎಲ್ಲಿ ಸಾರ್?’’ ಗುಳ್ಳಪ್ಪ ಕೇಳಿದ.
‘‘ಶಿವಾಜಿ ನಗರ ಚಿಕನ್ ಮಾರ್ಕೆಟ್‌ಗೆ ಬನ್ನಿ....’’ ಅತ್ತಲಿಂದ ಧ್ವನಿ.
‘‘ಯಾರು ಸಾರ್ ಇದು? ಝಮೀರ್ ಅಹಮದ?’’ ಗುಳ್ಳಪ್ಪ ಕಂಗಾಲಾಗಿ ಕೇಳಿದ.
‘‘ಏನ್ರೀ...ನೀವು ಚಿಕನ್ ರಂಗಣ್ಣ ಅಲ್ವ? ದಿನಾ ನಮಗೆ ಕೋಳಿ ಸಪ್ಲೈ ಮಾಡೋ ರಂಗಣ್ಣ? ನಮ್ಮ ಬಜೆಟ್‌ಗೆ ತಕ್ಕ ಹಾಗೆ ಕೋಳಿ ಸಪ್ಲೈ ಮಾಡೋರು ನೀವೇ ಅಲ್ವಾ?’’
ಗುಳ್ಳಪ್ಪ ಒಮ್ಮೆಲೆ ರಾಂಗಾದ ‘‘ನಾನು ಶಾಸಕ ಗುಳ್ಳಪ್ಪ ಮಾತನಾಡ್ತ ಇರೋದು...ನೀವು ಯಾರು?’’
ಅತ್ತಲಿಂದ ‘ರಾಂಗ್ ನಂಬರ್’ ಎಂದು ಪೋನ್ ಕುಕ್ಕಿದ ಸದ್ದು.

share
*ಚೇಳಯ್ಯ chelayya@gmail.com
*ಚೇಳಯ್ಯ chelayya@gmail.com
Next Story
X