ಹೂಡೆ ದರ್ಗಾ ಶರೀಫ್‌ನ ಉರೂಸ್ ಕಾರ್ಯಕ್ರಮ

ಉಡುಪಿ, ಫೆ.10: ತೋನ್ಸೆ ಹೂಡೆಯ ಹಝ್ರತ್ ಶೇಖ್ ಸಾದಿರ್ ವಲಿ ಯುಲ್ಲಾಹ್(ರ.ಅ.) ದರ್ಗಾ ಶರೀಫ್‌ನ ಉರೂಸ್ ಕಾರ್ಯಕ್ರಮ ಇತ್ತೀಚೆಗೆ ಜರಗಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಬಲ್ಲಿಗ್ ಸುನ್ನಿದಾಅವತೆ ಇಸ್ಲಾಮಿ ಇದರ ಅಲ್ಲಾಮ ಮುಫ್ತಿ ಶೇಖ್ ಇರ್ಷಾದ್ ಅಝ್ಹರಿ ನಜ್ಮಿ ಮುಖ್ಯ ಭಾಷಣ ಮಾಡಿದರು.
ಫಕ್ರೆ ಆಲಂ ನೂರಿ ಅವರಿಂದ ನಾಅತೆ ಶರೀಫ್ ನಡೆಯಿತು. ಅಧ್ಯಕ್ಷತೆಯನ್ನು ಮೌಲಾನ ನಝೀರ್ ಅಹ್ಮದ್ ತೋನ್ಸೆ ಅಝ್ಹರಿ ವಹಿಸಿದ್ದರು. ವೇದಿಕೆಯಲ್ಲಿ ಮೌಲಾನ ಅಬೂಬಕ್ಕರ್ ಲತೀಫಿ, ಮುಫ್ತಿ ಮುಹಮ್ಮದ್ ಫಾರೂಕ್ ಮಿಸ್ಬಾಹಿ, ಮೌಲಾನ ಮುಹಮ್ಮದ್ ಇಸ್ಮಾಯಿಲ್ ರಝ್ವಿ, ಮೌಲಾನ ಇರ್ಷಾದ್ ಸಅದಿ, ಮೌಲಾನ ಮುಅಝ್ಝಂ ಆರೀಫ್ ನಯೀಮಿ ಮೊದಲಾದವರು ಉಪಸ್ಥಿತರಿದ್ದರು.
ಉರೂಸ್ ಪ್ರಯುಕ್ತ ಹೂಡೆ ಪರಿಸರದಲ್ಲಿ ಬೃಹತ್ ಸಂದಲ್ ಮೆರವರಣಿಗೆ ಜರಗಿತು.
Next Story





