ಮಂಗಳೂರು: 'ಎಸ್ಒಟಿಸಿ' ಹಾಲಿಡೇ ಬಝಾರ್ ಶುಭಾರಂಭ

ಮಂಗಳೂರು, ಫೆ. 10: ನಗರದ ಹಳೆ ಬಂದರ್ ರಸ್ತೆಯ ಬಳಿ ಇರುವ ಗೇಟ್ ವೇ ಹೊಟೇಲ್ ನಲ್ಲಿ 'ಎಸ್ಒಟಿಸಿ ಹಾಲಿಡೇ ಬಝಾರ್' ರವಿವಾರ ನಡೆಯಿತು.
ಸಾಹಸ ಪ್ರವಾಸ, ದೇಶ, ವಿದೇಶದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಆಸಕ್ತಿ ಹೊಂದಿರುವ ಗ್ರಾಹಕರು ಮಳಿಗೆಗೆ ಭೇಟಿ ನೀಡಿದ್ದಾರೆ. ಸಮುದ್ರಯಾನ ವಿಮಾನಯಾನ ಹಾಗೂ ರಸ್ತೆ ಮಾರ್ಗವಾಗಿ, ಯುರೋಪ್, ಅಮೆರಿಕಾ, ಏಷ್ಯಾ, ಆಸ್ಟ್ರೇಲಿಯಾ, ನ್ಯೂಝಿಲ್ಯಾಂಡ್, ಈಜಿಪ್ಟ್, ಜಪಾನ್, ಆಫ್ರಿಕಾ, ಮಾಲ್ದೀವ್, ಚೈನಾ ಹಾಗೂ ಭಾರತದ ವಿವಿಧ ಕಡೆ ಪ್ರವಾಸ ಮಾಡಲಿಚ್ಚಿಸುವವರಿಗೆ ವಿಶೇಷವಾಗಿ ರಜಾ ದಿನಗಳಲ್ಲಿ ಪ್ರಪಂಚದ ವಿವಿಧ ಕಡೆಗಳಿಗೆ ಪ್ರವಾಸ ಮಾಡಲಿಚ್ಚಿಸುವ ಮಕ್ಕಳಿಗೆ, ಹಿರಿಯ ನಾಗರಿಕರಿಗೆ, ಸಾಹಸಿಗಳಿಗೆ ಒಂದು ದಿನದ ಬುಕ್ಕಿಂಗ್ ಅವಕಾಶವನ್ನು ನಗರದ ಹಾಲಿಡೇ ಬಝಾರ್ ಮೂಲಕ ಆಯ್ದುಕೊಳ್ಳಲು ವಿಶೇಷವಾಗಿ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ ಎಂದು ಎಸ್ಒಟಿಸಿ ಹಾಲಿಡೇ ಬಝಾರ್ ಪ್ರತಿನಿಧಿಗಳು ತಿಳಿಸಿದ್ದಾರೆ.










