ಕತರ್: ಉದ್ಯಮಿ ರವಿ ಶೆಟ್ಟಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

ಉಡುಪಿ, ಫೆ.10: ಸಮಾಜ ಸೇವೆ ಮತ್ತು ಉದ್ಯಮಶೀಲತೆ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಉದ್ಯಮಿ ಮೂಡಂಬೈಲ್ ರವಿ ಶೆಟ್ಟಿ ಅವರಿಗೆ ಅಮೆರಿಕಾದ ಕಿಂಗ್ಸ್ ಯುನಿವರ್ಸಿಟಿಯು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಕತರ್‌ನ ಕಿಂಗ್ಸ್ ಯುನಿವರ್ಸಿಟಿಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ರವಿ ಶೆಟ್ಟಿ ಅವರಿಗೆ ಪದವಿಯನ್ನು ಡಾ.ಎಸ್.ಸೆಲ್ವಿನ್ ಕುಮಾರ್ ಪ್ರದಾನ ಮಾಡಿ ದರು. ಈ ಸಂದರ್ಭದಲ್ಲಿ ಭಾರತೀಯ ರಾಯಾಭಾರಿ ಕುಮಾರ್ ಪಿ. ಉಪಸ್ಥಿತರಿದ್ದರು.
ಎಟಿಎಸ್ ಸಮೂಹ ಸಂಸ್ಥೆಗಳಲ್ಲಿ ಆಡಳಿತ ನಿರ್ದೇಶಕರಾಗಿರುವ ಇವರು, ಪ್ರಸ್ತುತ ಕತರ್ ಕರ್ನಾಟಕ ಸಂಘದ ಉಪಾಧ್ಯಕ್ಷ ಹಾಗೂ ಕತರ್ ತುಳು ಕೂಟದ ಮಹಾಪೋಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಇವರು ಬಂಟ್ಸ್ ಕತರ್ ಇದರ ಸ್ಥಾಪಕಾಧ್ಯಕ್ಷರಾಗಿ, ಮೂರು ಬಾರಿ ಕತರ್ ತುಳುಕೂಟ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಇವರಿಗೆ ಕತರ್ ತುಳು ಕೂಟದ ಅಧ್ಯಕ್ಷ ಅಶ್ಮತ್ ಅಲಿ, ಮಾಜಿ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ, ರಾಮಚಂದ್ರ ಶೆಟ್ಟಿ, ದಿವಾಕರ ಪೂಜಾರಿ, ಸ್ಥಾಪಕ ಸದಸ್ಯ ಇಕ್ಬಾಲ್ ಮನ್ನಾ ಅಭಿನಂದನೆ ಸಲ್ಲಿಸಿದ್ದಾರೆ.





