ಸಮಾಜದಲ್ಲಿ ರೇಡಿಯೋಗೆ ವಿಶಿಷ್ಟವಾದ ಸ್ಥಾನವಿದೆ: ನಟ ರಮೇಶ್ ಅರವಿಂದ್

ಬೆಂಗಳೂರು, ಫೆ.10: ಸಮಾಜದಲ್ಲಿ ರೇಡಿಯೋಗೆ ನೂರಾರು ವರ್ಷಗಳ ಇತಿಹಾಸವಿದೆ. ಇವತ್ತು ರೇಡಿಯೋ ಹೊಸ ಅವಿಷ್ಕಾರದಲ್ಲಿ ಜನರ ಮನಸ್ಸಿಗೆ ಹತ್ತಿರವಾಗಿದೆ ಎಂದು ಹಿರಿಯ ನಟ ರಮೇಶ್ ಅರವಿಂದ್ ತಿಳಿಸಿದರು.
ರವಿವಾರ 92.7 ಬಿಗ್ ಎಫ್‌ಎಂ ಆಯೋಜಿಸಿದ್ದ ‘ಯೋಚನೆ ಯಾಕೆ ಚೇಂಜ್ ಓಕೆ’ ಹೆಸರಿನ ಟ್ಯಾಗ್‌ಲೈನ್ ಹೊಂದಿರುವ ಹೊಸ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ರೇಡಿಯೋ ಕ್ಷೇತ್ರದಲ್ಲಿ ಬಿಗ್ ಎಫ್‌ಎಂ ಅದ್ಭುತವಾದ ಮತ್ತು ಶಕ್ತಿಯುತ ವೇದಿಕೆಯಾಗಿದೆ. ಜನರ ಹೃದಯದಲ್ಲಿ ಬಿಗ್ ಎಫ್‌ಎಂಗೆ ವಿಶೇಷವಾದ ಸ್ಥಾನವಿದೆ ಎಂದರು.
ನಟಿ ಪರುಲ್ ಯಾದವ್ ಮಾತನಾಡಿ, ನಾವೆಲ್ಲರೂ ಬಾಲ್ಯದಲ್ಲಿ ರೇಡಿಯೋ ಕಾರ್ಯಕ್ರಮಗಳನ್ನು ಕೇಳುತ್ತಾ ಬೆಳೆದವರು. ಈಗ ರೇಡಿಯೋ ಕ್ಷೇತ್ರದಲ್ಲಿ ಹೊಸ ಅವಿಷ್ಕಾರಗಳಾಗುತ್ತಿರುವುದು ಒಳ್ಳೆಯ ಬೆಳವಣಿಗೆಯೆಂದು ಅವರು ಹೇಳಿದರು. ಈ ವೇಳೆ ರೇಡಿಯೋ ಜಾಕಿ ಪ್ರದೀಪ್ ಉಪಸ್ಥಿತರಿದ್ದರು.
Next Story





