ವರ್ಗಾವಣೆ ಸಂಬಂಧ ತಹಶೀಲ್ದಾರ್ ಗಳ ನಡುವೆ ಮಾತಿನ ಚಕಮಕಿ: ಆಡಿಯೋ ವೈರಲ್
ಮೈಸೂರು,ಫೆ.10: ವರ್ಗಾವಣೆ ಸಂಬಂಧ ತಹಶೀಲ್ದಾರ್ ಗಳ ನಡುವೆ ಪೋನ್ ಮೂಲಕ ಮಾತಿನ ಚಕಮಕಿ ಉಂಟಾಗಿದೆ. ಆಯಕಟ್ಟಿನ ಸ್ಥಳಕ್ಕೆ ಬರಲು ಹಾಗೂ ಪ್ರಮುಖ ಸ್ಥಳ ಬಿಡುವ ಸಂಬಂಧ ತಹಶೀಲ್ದಾರ್ ಗಳ ಮಧ್ಯೆ ನಡೆದಿದೆ ಎನ್ನಲಾದ ಜಗಳದ ಆಡಿಯೋ ವೈರಲ್ ಆಗಿದೆ.
ಮೈಸೂರು ತಾಲೂಕು ಕಚೇರಿ ತಹಶೀಲ್ದಾರ್ ರಮೇಶ್ ಬಾಬು ಹಾಗು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೇಣುಕುಮಾರ್ ಅವರನ್ನು ಪ್ರಸ್ತುತ ಹಾಸನ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ಬೇಸರಗೊಂಡ ರೇಣುಕುಮಾರ್, ರಮೇಶ್ ಬಾಬು ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಫೋನ್ ಕರೆಯ ವೇಲೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಉನ್ನತ ಶಿಕ್ಷಣ ಇಲಾಖೆ ಸಚಿವ ಜಿ.ಟಿ.ದೇವೇಗೌಡ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಪರಸ್ಪರ ದೋಷಾರೋಪಣೆ ಹಾಗೂ ಆಣೆ ಪ್ರಮಾಣ, ಮಾತಿನ ವರಸೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿದೆ.
Next Story





