ಕಾಶ್ಮೀರ: ಐವರು ಉಗ್ರರ ಹತ್ಯೆ
![ಕಾಶ್ಮೀರ: ಐವರು ಉಗ್ರರ ಹತ್ಯೆ ಕಾಶ್ಮೀರ: ಐವರು ಉಗ್ರರ ಹತ್ಯೆ](https://www.varthabharati.in/sites/default/files/images/articles/2019/02/10/177153.jpg)
ಶ್ರೀನಗರ, ಫೆ.10: ದಕ್ಷಿಣ ಕಾಶ್ಮೀರದ ಕುಲ್ಗಾಂವ್ ಜಿಲ್ಲೆಯಲ್ಲಿ ರವಿವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಐವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜಿಲ್ಲೆಯ ಕೆಲ್ಲಂ ದೇವ್‌ಸರ್ ಪ್ರದೇಶದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ದೊರೆತ ಮಾಹಿತಿಯನ್ವಯ ಪೊಲೀಸ್ ತಂಡ, ರಾಷ್ಟ್ರೀಯ ರೈಫಲ್ಸ್ ಪಡೆ ಹಾಗೂ ಸಿಆರ್‌ಪಿಎಫ್ ತಂಡ ಬೆಳಿಗ್ಗೆ 6 ಗಂಟೆಗೆ ಈ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದೆ. ಜೊತೆಗೆ, ಈ ಪ್ರದೇಶದಲ್ಲಿ ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಈ ಹಂತದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಗೆ ಸ್ಥಳೀಯರು ಅಡ್ಡಿ ಪಡಿಸಿದಾಗ ಅವರನ್ನು ಭದ್ರತಾ ಪಡೆ ಚದುರಿಸಿದೆ.
ಬಳಿಕ ಮಧ್ಯಾಹ್ನ 12 ಗಂಟೆಯವರೆಗೆ ಮುಂದುವರಿದ ಕಾರ್ಯಾಚರಣೆಯಲ್ಲಿ ಎಲ್ಲಾ ಐವರು ಭಯೋತ್ಪಾದಕರನ್ನೂ ಹತ್ಯೆ ಮಾಡಲಾಗಿದ್ದು, ಇವರು ಸ್ಥಳೀಯರಾಗಿದ್ದಾರೆ. ಸ್ಥಳದಿಂದ ಶಸ್ತ್ರಾಸ್ತ್ರ ಹಾಗೂ ಯುದ್ಧ ಸಾಮಾಗ್ರಿಗಳ ದಾಸ್ತಾನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನಾಪಡೆಯ ವಕ್ತಾರ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.