ಮರದಿಂದ ಬಿದ್ದು ಮೃತ್ಯು
ಮಣಿಪಾಲ, ಫೆ.10: ಹೆರ್ಗಾ ಗ್ರಾಮದ ವಿಜಯನಗರದ ಕೋಡಿ ಎಂಬಲ್ಲಿ ಜ.27ರಂದು ಹಲಸಿನ ಮರದ ಕೊಂಬೆಗಳನ್ನು ಕತ್ತರಿಸುವ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕರ್ಜೆ ಪರಿಂಜೆ ನಿವಾಸಿ ಮೋಹನ ನಾಯ್ಕ(38) ಎಂಬವರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆ.9ರಂದು ರಾತ್ರಿ ಮೃತಪಟ್ಟಿ ದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





