Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತದಿಂದ ರೋಹಿಂಗ್ಯನ್ನರ ಗಡೀಪಾರು:...

ಭಾರತದಿಂದ ರೋಹಿಂಗ್ಯನ್ನರ ಗಡೀಪಾರು: ಕಾನೂನು, ನೈತಿಕತೆಯ ಉಲ್ಲಂಘನೆ

ತುಳಸಿ ಕೆ.ರಾಜ್, thehindu.comತುಳಸಿ ಕೆ.ರಾಜ್, thehindu.com10 Feb 2019 10:21 PM IST
share
ಭಾರತದಿಂದ ರೋಹಿಂಗ್ಯನ್ನರ ಗಡೀಪಾರು: ಕಾನೂನು, ನೈತಿಕತೆಯ ಉಲ್ಲಂಘನೆ

ಕಳೆದ ವರ್ಷದ ಅಕ್ಟೋಬರ್ ನಲ್ಲಿ ರೋಹಿಂಗ್ಯಾ ಸಮುದಾಯದ ಗುಂಪನ್ನು ಮ್ಯಾನ್ಮಾರ್ ಗೆ ಗಡೀಪಾರು ಮಾಡಿದ ಬಗ್ಗೆ ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆಯ ಹೈಕಮಿಷನರ್ (ಯುಎನ್‍ಎಚ್‍ಸಿಆರ್) ಜನವರಿಯಲ್ಲಿ ಭಾರತದಿಂದ ವರದಿ ಕೇಳಿದ್ದರು. ನಿರಾಶ್ರಿತರನ್ನು ಭಾರತದಿಂದ ವಾಪಾಸು ಕಳುಹಿಸಿರುವುದು, ನಿರಾಶ್ರಿತರ ಕುರಿತ ಅಂತರರಾಷ್ಟ್ರೀಯ ತತ್ವಕ್ಕೆ  ಹಾಗೂ ದೇಶಿಯ ಸಂವಿಧಾನಾತ್ಮಕ ಹಕ್ಕುಗಳಿಗೆ ವಿರುದ್ಧವಾದದ್ದು.

ಜಾಗತಿಕ ಕಾನೂನು ಚೌಕಟ್ಟು

ನಿರಾಶ್ರಿತರ ಕಾನೂನು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಒಂದು ಭಾಗ. ನಿರಾಶ್ರಿತರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ, ವಿಶ್ವಸಂಸ್ಥೆಯ ಪೂರ್ಣಾಧಿಕಾರಿಗಳ ಸಮ್ಮೇಳನವು, 1951ರಲ್ಲಿ ನಿರಾಶ್ರಿತರ ಸ್ಥಿತಿಗತಿಗೆ ಸಂಬಂಧಿಸಿದಂತೆ ಒಂದು ಒಪ್ಪಂದಕ್ಕೆ ಬಂದಿತು. ಆ ಬಳಿಕ 1967ರಲ್ಲಿ ನಿರಾಶ್ರಿತರ ಸ್ಥಿತಿಗತಿ ಕುರಿತ ಒಪ್ಪಂದ ಜಾರಿಗೊಳಿಸಲಾಯಿತು. ಈ ಒಪ್ಪಂದದ ಒಂದು ಪ್ರಮುಖವಾದ ಅಂಶವೆಂದರೆ, ನಿರಾಶ್ರಿತರ ಮೇಲೆ ಒತ್ತಡ ಹೇರದಿರುವ ತತ್ವ. ಈ ರೂಢಿಯ ಅನ್ವಯ, ಒಪ್ಪಂದಕ್ಕೆ ಸಹಿ ಮಾಡಿರುವ ಯಾವುದೇ ದೇಶ, ಒಬ್ಬ ವ್ಯಕ್ತಿಯ ವರ್ಣ, ಧರ್ಮ, ರಾಷ್ಟ್ರೀಯತೆ, ನಿರ್ದಿಷ್ಟ ಸಾಮಾಜಿಕ ಗುಂಪಿನ ಸದಸ್ಯತ್ವ ಅಥವಾ ರಾಜಕೀಯ ಅಭಿಪ್ರಾಯದ ಹಿನ್ನೆಲೆಯಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವುದಾದಲ್ಲಿ, ಯಾವುದೇ ಬಗೆಯಲ್ಲಿ ನಿರಾಶ್ರಿತರನ್ನು ತಮ್ಮ ಗಡಿಯಾಚೆಗಿನ ಅಂತಹ ಪ್ರದೇಶಕ್ಕೆ ವಾಪಸ್ ಕಳುಹಿಸಲು ಅಥವಾ ಉಚ್ಚಾಟಿಸಲು ಅವಕಾಶವಿಲ್ಲ". ನಿರಾಶ್ರಿತರಿಗೆ ರಕ್ಷಣೆ ಒದಗಿಸುವ ಸಲುವಾಗಿ ಉಚ್ಚಾಟನೆಯನ್ನು ನಿಷೇಧಿಸುವ ಅಂಶವನ್ನು ಅಂತರರಾಷ್ಟ್ರೀಯ ಕಾನೂನಿನಲ್ಲಿ ಸೇರಿಸಲಾಗಿದೆ.

ಆದರೆ ಭಾರತ 1951ರ ಒಪ್ಪಂದಕ್ಕೆ ಅಥವಾ 1967ರ ಶಿಷ್ಟಾಚಾರ ಚೌಕಟ್ಟಿಗೆ ಸಹಿ ಮಾಡದ ಹಿನ್ನೆಲೆಯಲ್ಲಿ ಈ ತತ್ವ ಭಾರತಕ್ಕೆ ಅನ್ವಯಿಸುವುದಿಲ್ಲ ಎಂದು ವಾದಿಸಲಾಗುತ್ತಿದೆ. ಆದಾಗ್ಯೂ ನಿರಾಶ್ರಿತರ ವಾಪಸ್ಸಾತಿಯನ್ನು ನಿಷೇಧಿಸುವ ಅಂಶ, ಅಂತರರಾಷ್ಟ್ರೀಯ ಕಾನೂನಿನ ಒಂದು ರೂಢಿ ಎಂದು ಪರಿಗಣಿತವಾಗಿದೆ. ಇದಕ್ಕೆ ಒಪ್ಪಂದಕ್ಕೆ ಸಹಿ ಮಾಡದ ದೇಶಗಳು ಕೂಡಾ ಬದ್ಧವಾಗಬೇಕಾಗುತ್ತದೆ. ನಿರಾಶ್ರಿತರ ವಾಪಸಾತಿಯನ್ನು ನಿಷೇಧಿಸುವ ಅಂಶ ಅನ್ವಯಕ್ಕೆ ಸಂಬಂಧಿಸಿದಂತೆ ಯುಎನ್‍ಎಚ್‍ಸಿಆರ್ ನ ಸಲಹಾ ಸಮಿತಿ 2007ರಲ್ಲಿ ನೀಡಿದ ಅಭಿಪ್ರಾಯದಂತೆ, "1951ರ ಒಪ್ಪಂದ ಅಥವಾ 1967ರ ಶಿಷ್ಟಾಚಾರ ಚೌಕಟ್ಟು ಒಪ್ಪಂದಕ್ಕೆ ಇನ್ನೂ ಸಹಿ ಮಾಡದ ದೇಶಗಳೂ ಸೇರಿದಂತೆ ಇದಕ್ಕೆ ಎಲ್ಲ ದೇಶಗಳೂ ಬದ್ಧವಾಗಿರಬೇಕು".

ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ 14ನೇ ಅನುಚ್ಛೇದದಂತೆ, ತಮ್ಮ ವಿರುದ್ಧದ ದಬ್ಬಾಳಿಕೆಯಿಂದ ಯಾವುದೇ ದೇಶಗಳಲ್ಲಿ ಆಶ್ರಯ ಪಡೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಇದಕ್ಕಿಂತ ಹೆಚ್ಚಾಗಿ, ಸಂವಿಧಾನದ 51ನೇ ವಿಧಿಯು ಸೂಚಿಸುವಂತೆ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಹೊಣೆಗಾರಿಕೆ ಸರ್ಕಾರದ ಮೇಲೆ ಇರುತ್ತದೆ. ಸಂವಿಧಾನದ 51 (ಸಿ) ವಿಧಿಯು ಅಂತರರಾಷ್ಟ್ರೀಯ ಕಾನೂನು ಮತ್ತು ಒಪ್ಪಂದದ ಹೊಣೆಗಾರಿಕೆಯನ್ನು ಪ್ರೋತ್ಸಾಹಿಸುವ ಬಗ್ಗೆ ಹೇಳುತ್ತದೆ. ಅಂದರೆ ಅಂತರರಾಷ್ಟ್ರೀಯ ಕಾನೂನನ್ನು ದೇಶೀಯವಾಗಿ ಅಳವಡಿಸಿಕೊಳ್ಳುವಂತೆ ಸಂವಿಧಾನ ಸ್ಪಷ್ಟವಾಗಿ ನಿರ್ದೇಶಿಸುತ್ತದೆ. ಆದ್ದರಿಂದ ನಿರಾಶ್ರಿತರ ವಾಪಸಾತಿ ವಿಚಾರದಲ್ಲಿ ಅಂತರರಾಷ್ಟ್ರೀಯ ಬದ್ಧತೆಯನ್ನು ಉಲ್ಲಂಘಿಸಿಲ್ಲ ಎನ್ನುವ ವಾದ ಸರಿಯಲ್ಲ.

ಆಂತರಿಕ ಬದ್ಧತೆ

ಭಾರತ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಕುರಿತ ಅಧ್ಯಾಯದಲ್ಲಿ ನಾಗರಿಕರು ಹಾಗೂ ವ್ಯಕ್ತಿಗಳ ಹಕ್ಕುಗಳ ನಡುವಿನ ಭಿನ್ನತೆಯನ್ನು ಸ್ಪಷ್ಟವಾಗಿ ಹೇಳಿದೆ. ನಾಗರಿಕರಿಗೆ ಎಲ್ಲ ಹಕ್ಕುಗಳು ಲಭ್ಯವಿದ್ದರೂ, ವಿದೇಶಿ ಪ್ರಜೆಗಳು ಸೇರಿದಂತೆ ಇತರ ವ್ಯಕ್ತಿಗಳಿಗೆ, ಇತರ ಹಕ್ಕುಗಳ ಜತೆಗೆ ಸಮಾನತೆಯ ಹಕ್ಕು ಮತ್ತು ಜೀವಿಸುವ ಹಕ್ಕು ಇದೆ. ರೋಹಿಂಗ್ಯಾ ನಿರಾಶ್ರಿತರು ರಾಷ್ಟ್ರೀಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವುದರಿಂದ, ಇವರ ಜೀವಿಸುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ನಿರಾಕರಿಸುವಂತಿಲ್ಲ.

ಬಿಬಿಸಿ ವರದಿಯ ಪ್ರಕಾರ, ರೋಹಿಂಗ್ಯನ್ನರು ಇಡೀ ವಿಶ್ವದಲ್ಲೇ ಕನಿಷ್ಠ ಅಪೇಕ್ಷಿತ ಮತ್ತು ಗರಿಷ್ಠ ದಬ್ಬಾಳಿಕೆಗೆ ಒಳಗಾದ ಜನ. ಮ್ಯಾನ್ಮಾರ್ ನಲ್ಲಿ ಅವರಿಗೆ ಪೌರತ್ವ ನಿರಾಕರಿಸಲಾಗಿದೆ. ಜತೆಗೆ ಭೂಮಿಯನ್ನು ಹೊಂದುವ ಮತ್ತು ಪ್ರಯಾಣ ಕೈಗೊಳ್ಳುವ ಹಕ್ಕು ಇಲ್ಲ. ಜತೆಗೆ ಅನುಮತಿ ಇಲ್ಲದೇ ವಿವಾಹವಾಗುವಂತೆಯೂ ಇಲ್ಲ ಎಂದು ವರದಿ ವಿವರಿಸಿದೆ. ವಿಶ್ವಸಂಸ್ಥೆಯ ಪ್ರಕಾರ, ರೋಹಿಂಗ್ಯಾ ಸಮಸ್ಯೆಯು ಇಡೀ ಸಮೂಹವನ್ನೇ ಮ್ಯಾನ್ಮಾರ್‍ನಲ್ಲಿ ನಾಶಪಡಿಸುವ ವ್ಯವಸ್ಥಿತ ಹಾಗೂ ದೇಶವ್ಯಾಪಿ ಸಂಚು.

ಆದ್ದರಿಂದ, ವಿಶ್ವ ರಾಜಕೀಯದಲ್ಲಿ ರೋಹಿಂಗ್ಯ ಸಮುದಾಯ ಎದುರಿಸುತ್ತಿರುವ ತಾರತಮ್ಯ ಹೋಲಿಕೆ ಇಲ್ಲದ್ದು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ವರ್ಸಸ್ ಅರುಣಾಚಲ ಪ್ರದೇಶ ಸರ್ಕಾರದ ಪ್ರಕರಣ (1996)ದಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿರುವಂತೆ, "ನಮ್ಮ ಸಂವಿಧಾನವು ಪ್ರತಿಯೊಬ್ಬ ಮನುಷ್ಯರಿಗೂ ಹಕ್ಕುಗಳನ್ನು ನೀಡಿದೆ. ಪೌರರಾದವರಿಗೆ ಕೆಲ ನಿರ್ದಿಷ್ಟ ಹಕ್ಕುಗಳನ್ನು ನೀಡಿದೆ. ಪ್ರತಿಯೊಬ್ಬ ವ್ಯಕ್ತಿ ಕಾನೂನಿನ ಎದುರು ಸಮಾನ ಹಾಗೂ ಕಾನೂನುಗಳು ಪ್ರತಿಯೊಬ್ಬರಿಗೂ ಸಮಾನ ರಕ್ಷಣೆಯನ್ನು ಒದಗಿಸಬೇಕು. ಆದ್ದರಿಂದ ಯಾವ ವ್ಯಕ್ತಿಗಳಿಗೂ, ಕಾನೂನಾತ್ಮಕ ವಿಧಿವಿಧಾನಗಳಿಗೆ ಅನುಗುಣವಾದ ಅಂಶಗಳನ್ನು ಹೊರತುಪಡಿಸಿ ಅವರ ಜೀವನದ ಹಕ್ಕನ್ನು ನಿರಾಕರಿಸುವಂತಿಲ್ಲ ಅಥವಾ ವೈಯಕ್ತಿಕ ಸ್ವಾತಂತ್ರ್ಯವನ್ನು ನಿರಾಕರಿಸುವಂತಿಲ್ಲ. ಆದ್ದರಿಂದ ನಾಗರಿಕ ಅಥವಾ ಇತರರು ಯಾರೇ ಆಗಲಿ, ಪ್ರತಿಯೊಬ್ಬ ಮನುಷ್ಯರ ಜೀವ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಹೊಣೆಗಾರಿಕೆ ಸರ್ಕಾರಕ್ಕೆ ಇದೆ"

ಭಾರತಕ್ಕೆ ನಿರಾಶ್ರಿತರ ವಲಸೆ ಹೆಚ್ಚುತ್ತಿದ್ದರೂ, ನಿರಾಶ್ರಿತರ ಸಮಸ್ಯೆಗಳನ್ನು ಬಗೆಹರಿಸುವ ನಿರ್ದಿಷ್ಟ ಕಾನೂನುಗಳು ಭಾರತದಲ್ಲಿ ಇಲ್ಲ. ವಿದೇಶಿಯರ ಕಾಯ್ದೆ-1946, ಒಂದು ವರ್ಗವಾಗಿ ನಿರಾಶ್ರಿತರು ಎದುರಿಸುತ್ತಿರುವ ವಿಶಿಷ್ಟ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ಇದರ ಜತೆಗೆ ಈ ಕಾಯ್ದೆ ಕೇಂದ್ರ ಸರ್ಕಾರಕ್ಕೆ, ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡುವ ಅನಿಯಂತ್ರಿತ ಅಧಿಕಾರವನ್ನು ನೀಡುತ್ತದೆ. 2019ರ ಪೌರತ್ವ (ತಿದ್ದುಪಡಿ) ಕಾಯ್ದೆಯು ಪೌರತ್ವ ಪಡೆಯುವ ಅರ್ಹತೆಯಿಂದ ಮುಸ್ಲಿಮರನ್ನು ಹೊರತುಪಡಿಸುತ್ತದೆ ಹಾಗೂ ಇದರ ಅನ್ವಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನದಲ್ಲಿ ದಬ್ಬಾಳಿಕೆಗೆ ಒಳಗಾದ ಹಿಂದೂಗಳು, ಕ್ರಿಶ್ಚಿಯನ್ನರು, ಜೈನರು, ಪಾರ್ಸಿ, ಸಿಕ್ಖ್ ಮತ್ತು ಬೌದ್ಧ ನಿರಾಶ್ರಿತರಿಗೆ ಮಾತ್ರ ಪೌರತ್ವ ನೀಡಲು ಅವಕಾಶವಿದೆ. ರೋಹಿಂಗ್ಯಾರಲ್ಲಿ ಬಹುತೇಕ ಮಂದಿ ಮುಸ್ಲಿಮರು. ಧರ್ಮದ ಆಧಾರದಲ್ಲಿ ನಿಗದಿಪಡಿಸುವ ಈ ಇತಿಮಿತಿಯು, ಭಾರತ ಸಂವಿಧಾನದ 14ನೇ ವಿಧಿಗೆ ಅನುಗುಣವಾಗಿ ಇಲ್ಲ ಹಾಗೂ ಸಂವಿಧಾನದ ಮೂಲ ತತ್ವ ಎನಿಸಿದ ಜಾತ್ಯತೀತತೆಗೇ ಇದು ವಿರುದ್ಧವಾದದ್ದು.

ಅಮೆರಿಕದ ತತ್ವಶಾಸ್ತ್ರಜ್ಞ ರೊನಾಲ್ಡ್ ಡೋರ್ಕಿನ್ ಪ್ರತಿಪಾದಿಸುವಂತೆ, ಅಂತರರಾಷ್ಟ್ರೀಯ ಕಾನೂನನ್ನು ನಾವು ಕಾನೂನು ಎಂದು ವಾದಿಸುವುದಾದರೆ, ಇದನ್ನು ನಾವು ಹೆಚ್ಚಾಗಿ ನೈತಿಕತೆ ಎಂದು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಇಂಥ ಚಿಂತನೆಯಲ್ಲಿ ಭಾರತದಿಂದ ನಿರಾಶ್ರಿತರನ್ನು ಗಡೀಪಾರು ಮಾಡಿರುವುದು ಕಾನೂನುಬಾಹಿರ ಮಾತ್ರವಲ್ಲದೇ ಮಹತ್ವದ ನೈತಿಕ ಬದ್ಧತೆಯ ಉಲ್ಲಂಘನೆಯೂ ಆಗಿದೆ.

(ತುಳಸಿ ಕೆ.ರಾಜ್, ಕೇರಳ ಹೈಕೋರ್ಟ್ ವಕೀಲೆ)

share
ತುಳಸಿ ಕೆ.ರಾಜ್, thehindu.com
ತುಳಸಿ ಕೆ.ರಾಜ್, thehindu.com
Next Story
X