Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…

ಓ ಮೆಣಸೇ…

ಪಿ.ಎ.ರೈಪಿ.ಎ.ರೈ11 Feb 2019 12:14 AM IST
share
ಓ ಮೆಣಸೇ…

 *ಬಿಜೆಪಿಗೆ ಮತ ಹಾಕುವ ಮುಸ್ಲಿಮರು ಮುಸ್ಲಿಮರೇ ಅಲ್ಲ - ಝಮೀರ್‌ಅಹ್ಮದ್, ಸಚಿವ
  ಅಲ್ಪಸಂಖ್ಯಾತ ಇಲಾಖೆಯಿಂದ ಯಾರು ಮುಸ್ಲಿಮರು? ಯಾರು ಮುಸ್ಲಿಮರಲ್ಲ? ಎನ್ನುವ ಪ್ರಮಾಣ ಪತ್ರ ನೀಡಲು ಶುರು ಮಾಡಿ.

---------------------
  ಸದ್ಯಕ್ಕೆ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದೇನೆ - ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ
  ಇದೀಗ ಸಮಯಸಾಧಕ ರಾಜಕಾರಣಕ್ಕಷ್ಟೇ ಉಳಿದ ಬದುಕು ಮೀಸಲು.

---------------------
  ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ- ಸತೀಶ್ ಜಾರಕಿಹೊಳಿ, ಶಾಸಕ
ತಮ್ಮ ಸೋದರನೂ ಅದೇ ಆಸೆ ಹೊಂದಿದ್ದರೆ ಕಷ್ಟ.

---------------------
ಒಂದು ವೇಳೆ ನನಗೇನಾದರೂ ಆದರೆ ಅದಕ್ಕೆ ಪ್ರಧಾನಿ ಮೋದಿಯೇ ಹೊಣೆಗಾರ - ಅಣ್ಣಾಹಝಾರೆ, ಸಾಮಾಜಿಕ ಕಾರ್ಯಕರ್ತ
  ಮೋದಿ ಪ್ರಧಾನಿ ಆಗುವುದರ ಹಿಂದಿನ ಹೊಣೆಗಾರರು ನೀವಲ್ಲವೇ?

---------------------
ದೇಶದಲ್ಲಿ ಈಗ ನಿರುದ್ಯೋಗ ಸಮಸ್ಯೆ ಇಲ್ಲವೇ ಇಲ್ಲ - ಅರುಣ್‌ಜೇಟ್ಲಿ, ಕೇಂದ್ರ ಸಚಿವ
ಗುಂಪು ಹತ್ಯೆ, ನಕಲಿ ಗೋರಕ್ಷಣೆ ಇವೆಲ್ಲವು ನಿಮ್ಮ ದೃಷ್ಟಿಯಲ್ಲಿ ಉದ್ಯೋಗಗಳೇ ಇರಬೇಕು.

---------------------
ರಾಜಕೀಯದಲ್ಲಿ ಸತ್ಯಹರಿಶ್ಚಂದ್ರರಿದ್ದರೆ ಅವರು ಸ್ಮಶಾನ ಕಾಯಬೇಕಾಗುತ್ತದೆ - ಬಿ.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯ
ಸದ್ಯಕ್ಕೆ ಸ್ಮಶಾನ ಕಾಯುವವರೆಲ್ಲ ರಾಜಕೀಯ ಸೇರಿಕೊಂಡಿದ್ದಾರೆ.

---------------------
ನಾವು ಯಾವ ಪಕ್ಷದಲ್ಲಿದ್ದೇವೆ ಎನ್ನುವುದಕ್ಕಿಂತ ನಮ್ಮ ಧ್ವನಿಗೆ ಸ್ಪಂದಿಸುವವರು ಯಾರಿದ್ದಾರೆ ಎನ್ನುವುದು ಮುಖ್ಯ - ಶೋಭಾ ಕರಂದ್ಲಾಜೆ, ಸಂಸದೆ
ಬಿಜೆಪಿಯಲ್ಲಿ ನಿಮ್ಮ ಧ್ವನಿಗೆ ಸ್ಪಂದಿಸುವವರು ತಮ್ಮ ಧ್ವನಿಯ ಕುರಿತಂತೆ ತಪ್ಪೊಪ್ಪಿಕೊಂಡಿದ್ದಾರೆ.

---------------------
ನನಗೆ ಕಮಲ ಗೊತ್ತು, ಆಪರೇಶನ್ ಗೊತ್ತಿಲ್ಲ - ಎಸ್.ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ
ಬಿಜೆಪಿಯ ಆಪರೇಶನ್‌ನಿಂದ ನರ ಕತ್ತರಿಸಲ್ಪಟ್ಟವರ ಮಾತು.

---------------------
ಜನರ ಸೇವೆ ಮಾಡಲು ನಿಜವಾದ ವೇದಿಕೆ ರಾಜಕೀಯ - ಉಪೇಂದ್ರ, ನಟ
‘ಬುದ್ಧಿವಂತರಿಗೆ ಮಾತ್ರ’ ಅನ್ವಯವಾಗದ ಮಾತು.

---------------------
ನಾನು ಧರ್ಮದ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ - ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವ
ಅದರ ಬಗ್ಗೆ ಗೊತ್ತಿದ್ದರೆ ಧರ್ಮದ ಹೆಸರಲ್ಲಿ ಇಷ್ಟೆಲ್ಲ ಅನಾಚಾರಗಳನ್ನು ನೀವು ಮಾಡುತ್ತಿರಲಿಲ್ಲ.

---------------------
ಕುಟುಂಬದ ಹೊಣೆ ಹೊರದವ ದೇಶ ಮುನ್ನಡೆಸಲಾರ - ನಿತಿನ್‌ ಗಡ್ಕರಿ, ಕೇಂದ್ರ ಸಚಿವ
ಜಶೋದಾಬೆನ್ ಕಿಸಕ್ಕನೆ ನಕ್ಕರಂತೆ.

---------------------

ಪ್ರಧಾನಿ ಮೋದಿ ದೇಶಕ್ಕೆ ಎರಗಿದ ಶನಿ - ಜನಾರ್ದನ ಪೂಜಾರಿ, ಕಾಂಗ್ರೆಸ್ ಮುಖಂಡ
ಮಂಗಳೂರು ಲೋಕಸಭಾ ಚುನಾವಣೆ ಟಿಕೆಟ್‌ಗೆ ಮತ್ತೆ ತಯಾರಿ ನಡೆಸಿದಂತಿದೆ.

---------------------
ಬಿಜೆಪಿಯಲ್ಲಿ ಕೆಚ್ಚು ಇರುವ ವ್ಯಕ್ತಿ ನಿತಿನ್‌ ಗಡ್ಕರಿ ಮಾತ್ರ - ರಾಹುಲ್‌ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಆ ಕೆಚ್ಚು ಕಾಂಗ್ರೆಸ್‌ನಲ್ಲಿರುವವರಲ್ಲಿ ಬರುವುದು ಯಾವಾಗ?
---------------------

ಕೇವಲ 3 ದಿನ ಮಾತ್ರ ಮುಖ್ಯಮಂತ್ರಿಯಾಗಿದ್ದಕ್ಕೆ ಯಡಿಯೂರಪ್ಪರ ಮನಸ್ಸಿಗೆ ನೋವಾಗಿದೆ - ದೇವೇಗೌಡ, ಮಾಜಿ ಪ್ರಧಾನಿ
 ಅಷ್ಟೇ ಅಲ್ಲ, ನೋವು ಮಾಡಿದವರು ಎರಡೆರಡು ಬಾರಿ ಮುಖ್ಯಮಂತ್ರಿಯಾಗಿರುವುದು ಕೂಡ.

---------------------

ಪ್ರಧಾನಿ ಮೋದಿ ರಾಜಕೀಯದಿಂದ ನಿವೃತ್ತರಾದ ದಿನವೇ ನಾನು ರಾಜಕೀಯವನ್ನು ತೊರೆಯುತ್ತೇನೆ - ಸ್ಮತಿ ಇರಾನಿ, ಕೇಂದ್ರ ಸಚಿವೆ
ಮತದಾರರಿಗೆ ಬೋನಸ್.

---------------------
ನಮ್ಮ ಮೈತ್ರಿ ಸರಕಾರದ ಎತ್ತಿನ ಗಾಡಿ ಸುಭದ್ರವಾಗಿ ಸಾಗುತ್ತಿದೆ - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಎತ್ತು ಕತ್ತೆಯಾಗದಂತೆ ನೋಡಿಕೊಳ್ಳಿ.

---------------------
ಮುಖ್ಯಮಂತ್ರಿ(ಮಮತಾ ಬ್ಯಾನರ್ಜಿ)ಯೊಬ್ಬರು ಬೀದಿಯಲ್ಲಿ ನಿಂತು ಧರಣಿ ನಡೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೇ ಅಪಮಾನ - ಯೋಗಿ ಆದಿತ್ಯನಾಥ್, ಉ.ಪ್ರ.ಮುಖ್ಯಮಂತ್ರಿ
ಬೀದಿಯಲ್ಲಿ ನಡೆಯುತ್ತಿರುವ ಗುಂಪು ಹತ್ಯೆಗಳು ಪ್ರಜಾಪ್ರಭುತ್ವದ ಹೆಗ್ಗಳಿಕೆ ಇರಬೇಕು.

---------------------

ನರೇಂದ್ರ ಮೋದಿ ಆಡಳಿತಕ್ಕಿಂತ ತುರ್ತು ಪರಿಸ್ಥಿತಿಯೇ ಎಷ್ಟೋ ಉತ್ತಮವಾಗಿತ್ತು - ಚಂದ್ರಬಾಬುನಾಯ್ಡು, ಆಂಧ್ರ ಮುಖ್ಯಮಂತ್ರಿ
ಇನ್ನೊಂದು ಅವಕಾಶ ಕೊಟ್ಟರೆ ಅದನ್ನೂ ಕೊಡುತ್ತೇನೆ ಎಂದರಂತೆ ಮೋದಿ.

---------------------

ಲೋಕಸಭೆ ಚುನಾವಣೆ ಮುಗಿಯುವವರೆಗೂ ಅಯೋಧ್ಯೆ ರಾಮಮಂದಿರ ನಿರ್ಮಾಣ ಪ್ರಸ್ತಾವವಿಲ್ಲ - ಅಲೋಕ್‌ಕುಮಾರ್, ವಿಎಚ್‌ಪಿ ಕಾರ್ಯಾಧ್ಯಕ್ಷ
ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದರ ಆಧಾರದಲ್ಲಿ ಮತ್ತೆ ನಿರ್ಮಾಣದ ಪ್ರಸ್ತಾವ ಇಡುತ್ತಾರಂತೆ.

---------------------
ನಾವು ಮದುವೆಯಾಗಿ ನಡೆಸಬೇಕಾಗಿದ್ದ ಸಂಸಾರವನ್ನು ಕಾಂಗ್ರೆಸ್ - ಜೆಡಿಎಸ್ ಅಕ್ರಮವಾಗಿ ಸೇರಿಕೊಂಡು ನಡೆಸುತ್ತಿದ್ದಾರೆ - ಜಗದೀಶ್ ಶೆಟ್ಟರ್, ಶಾಸಕ
ಅಕ್ರಮವೋ, ಸಕ್ರವೋ ಮಗು ಹುಟ್ಟಿದರೆ ಆಯಿತಲ್ಲ?

---------------------

‘ಕಾಂಗ್ರೆಸ್ ಮುಕ್ತ ಭಾರತ’ ಘೋಷಣೆ ನನ್ನದಲ್ಲ , ಅದು ಗಾಂಧೀಜಿಯ ಆಶಯ - ನರೇಂದ್ರ ಮೋದಿ, ಪ್ರಧಾನಿ
 ಅದಕ್ಕೇ ತಾನೆ, ಗೋಡ್ಸೆ ಗಾಂಧಿಯನ್ನು ಕೊಂದದ್ದು.

---------------------

ಪ್ರತಿ ಮನೆಯಲ್ಲಿ ಪುಸ್ತಕಗಳಿಗೆ ಪ್ರಮುಖ ಜಾಗವಿರಲಿ -ಹಂಪ ನಾಗರಾಜಯ್ಯ, ಹಿರಿಯ ಸಾಹಿತಿ
ಮೊದಲು ಜನರಿಗೆ ಮನೆಗಳನ್ನು ಕೊಡಿಸಿ.

---------------------
ಯುನಾನಿ ಪದ್ಧತಿ ಕುರಿತು ಜನತೆಯಲ್ಲಿ ವಿಶ್ವಾಸ ಮೂಡಿಸಬೇಕಿದೆ - ಮೀನಾಕ್ಷಿ ನೇಗಿ,  
ನಿರ್ದೇಶಕಿ, ಆಯುಷ್ ಇಲಾಖೆ

ಕಾಯಿಲೆ ಗುಣವಾದರೆ ವಿಶ್ವಾಸ ತನ್ನಷ್ಟಕ್ಕೇ ಮೂಡುತ್ತದೆ. ಜಾಹೀರಾತಿಗೆ ಹಣವೇಕೆ ವ್ಯರ್ಥ ಮಾಡುತ್ತೀರಿ?

share
ಪಿ.ಎ.ರೈ
ಪಿ.ಎ.ರೈ
Next Story
X