ಪೈಲಟ್ಗಳ ಕೊರತೆ: ಫೆ.11ರಂದು ಇಂಡಿಗೋದ 32 ವಿಮಾನಯಾನಗಳು ರದ್ದು
ಹೊಸದಿಲ್ಲಿ,ಫೆ.10: ಪೈಲಟ್ಗಳ ಕೊರತೆಯಿಂದಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ಕಳೆದೆರಡು ದಿನಗಳಲ್ಲಿ ತನ್ನ ಹಲವಾರು ಯಾನಗಳನ್ನು ರದ್ದುಗೊಳಿಸಿದ್ದು,ಸೋಮವಾರ 32 ಯಾನಗಳನ್ನು ನಿರ್ವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಇಂಡಿಗೋ ದಿಲ್ಲಿ,ಕೋಲ್ಕತಾ,ಚೆನ್ನೈ,ಬೆಂಗಳೂರು ಮತ್ತು ಹೈದರಾಬಾದ್ಗಳಿಂದ ತನ್ನ ಹಾರಾಟಗಳನ್ನು ರದ್ದುಗೊಳಿಸಿದೆ ಎಂದು ಅವು ತಿಳಿಸಿವೆ.
ದೇಶದ ಬೃಹತ್ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ಶನಿವಾರ ಸುಮಾರು 15 ಮತ್ತು ರವಿವಾರ ಸುಮಾರು ಏಳು ಯಾನಗಳನ್ನು ರದ್ದುಗೊಳಿಸಿತ್ತು ಎಂದು ದಿಲ್ಲಿ ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದರೆ, ರವಿವಾರ ಸುಮಾರು 16 ಯಾನಗಳನು ರದ್ದುಗೊಳಿಸಲಾಗಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿಯ ಅಧಿಕಾರಿಗಳು ಹೇಳಿದರು.
Next Story