ಪಂಕಜ್ಗೆ 9ನೇ ರಾಷ್ಟ್ರೀಯ ಸ್ನೂಕರ್ ಪ್ರಶಸ್ತಿ
ಇಂದೋರ್, ಫೆ.10: ಭಾರತದ ಖ್ಯಾತ ಸ್ನೂಕರ್ಪಟು ಪಂಕಜ್ ಅಡ್ವಾಣಿ ಏಕಪಕ್ಷೀಯವಾಗಿ ಸಾಗಿದ ಫೈನಲ್ನಲ್ಲಿ ಯುವ ಸ್ನೂಕರ್ ಲಕ್ಷ್ಮಣ್ ರಾವತ್ರನ್ನು ಸೋಲಿಸಿ ಮತ್ತೊಂದು ಹಿರಿಯರ ರಾಷ್ಟ್ರೀಯ ಸ್ನೂಕರ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ಅಡ್ವಾಣಿ ಯುವ ಸ್ನೂಕರ್ಪಟು ರಾವತ್ರನ್ನು ಫೈನಲ್ನಲ್ಲಿ 6-0 ಅಂತರದಿಂದ ಸೋಲಿಸಿ ಪ್ರಶಸ್ತಿ ಜಯಿಸಿದರು. ಜೂನಿಯರ್ ಮಟ್ಟದಲ್ಲಿ 11 ರಾಷ್ಟ್ರೀಯ ಪ್ರಶಸ್ತಿಗಳನ್ನು ಜಯಿಸಿರುವ ಅಡ್ವಾಣಿ ಹಿರಿಯರ ವಿಭಾಗದಲ್ಲಿ 9 ಬಿಲಿಯರ್ಡ್ಸ್,3 ರೆಡ್ ಸ್ನೂಕರ್ ಹಾಗೂ ಇದೀಗ 9ನೇ ಸ್ನೂಕರ್ ಚಿನ್ನದ ಪದಕಗಳನ್ನು ಜಯಿಸಿದ್ದಾರೆ.
ಅಂಕಿ-ಅಂಶಗಳ ದೃಷ್ಟಿಯಿಂದ ಪಂಕಜ್ ಇದೀಗ ಆಟಗಾರನಾಗಿ ಸ್ನೂಕರ್ ಹಾಗೂ ಬಿಲಿಯರ್ಡ್ಸ್ನಲ್ಲಿ 21 ವಿಶ್ವ ಪ್ರಶಸ್ತಿ ಹಾಗೂ 21 ರಾಷ್ಟ್ರೀಯ ಪ್ರಶಸ್ತಿಗಳನ್ನು ಜಯಿಸಿದ್ದಾರೆ.
Next Story