9 ವರ್ಷದ ಬಾಲಕನ ಅತ್ಯಾಚಾರ ಆರೋಪ: 36 ವರ್ಷದ ಮಹಿಳೆಯ ಬಂಧನ
ಮಲಪ್ಪುರಂ, ಫೆ.11: ಒಂಬತ್ತು ವರ್ಷದ ಬಾಲಕನ ಮೇಲೆ ಅತ್ಯಾಚಾರಗೈದ ಆರೋಪದ ಮೇಲೆ ಥೆನ್ನಿಪ್ಪಳಂ ಪೊಲೀಸರು 36 ವರ್ಷದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಾಲಕ ಸ್ಥಳೀಯ ವೈದ್ಯರ ಬಳಿ ತೆರಳಿ ಕ್ಲಿನಿಕ್ ನಲ್ಲಿ ಈ ವಿಚಾರ ತಿಳಿಸಿದಾಗಲಷ್ಟೇ ಅದು ಹೊರಜಗತ್ತಿಗೆ ತಿಳಿದು ಬಂದಿತ್ತು. ವೈದ್ಯರು ಕೂಡಲೇ ಚೈಲ್ಡ್ ಲೈನ್ ಗೆ ತಿಳಿಸಿದ್ದು, ಬಾಲಕನ ಹೇಳಿಕೆ ದಾಖಲಿಸಿಕೊಂಡು ನಂತರ ದೂರು ದಾಖಲಿಸಲಾಗಿದೆ. ಆರೋಪಿ ಮಹಿಳೆಯ ವಿರುದ್ಧ ಪೋಕ್ಸೋ ಅನ್ವಯ ಪ್ರಕರಣ ದಾಖಲಾಗಿದೆ.
ಬಾಲಕನ ಮೇಲೆ ಆರೋಪಿ ಮಹಿಳೆ ಕಳೆದೊಂದು ವರ್ಷದಿಂದ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾಳೆಂದು ತಿಳಿದು ಬಂದಿದ್ದು, ಇದರಿಂದ ಬಾಲಕ ಮಾನಸಿಕ ಖಿನ್ನತೆಗೊಳಗಾಗಿದ್ದ. ಆರೋಪಿ ಮಹಿಳೆ ಬಾಲಕನ ಸಂಬಂಧಿಯ ಪತ್ನಿಯಾಗಿದ್ದು, ಆತನ ಮನೆ ಪಕ್ಕದಲ್ಲಿಯೇ ಆಕೆಯ ಮನೆಯಿದೆ. ಆರೋಪಿ ಮಹಿಳೆ ಹಾಗೂ ಬಾಲಕನ ಕುಟುಂಬದ ನಡುವೆ ವಿವಾದವಿತ್ತೆನ್ನಲಾಗಿದ್ದು, ಇದಕ್ಕೂ ಈ ದೌರ್ಜನ್ಯಕ್ಕೂ ಸಂಬಂಧವಿದೆಯೇ ಎಂದು ತಿಳಿಯಲು ಪೊಲೀಸರು ಯತ್ನಿಸುತ್ತಿದ್ದಾರೆ.
Next Story