ಒಂದೇ ಒಂದು ಟ್ವೀಟ್ ಮಾಡದಿದ್ದರೂ ಪ್ರಿಯಾಂಕ ಗಾಂಧಿಗೆ 97 ಸಾವಿರ ಫಾಲೋವರ್ಸ್!

ಲಕ್ನೋ, ಫೆ.11: ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ಇದೇ ಮೊದಲ ಬಾರಿಗೆ ಲಕ್ನೋದಲ್ಲಿ ರೋಡ್ ಶೋ ನಡೆಸಿರುವ ಪ್ರಿಯಾಂಕ ಗಾಂಧಿ ವಾದ್ರಾ ಟ್ವಿಟರ್ ಸೇರಿದ್ದಾರೆ.
ಈ ಸುದ್ದಿಯನ್ನು ಇಂದು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ತಿಳಿಸಿದ್ದು ಕೆಲವೇ ನಿಮಿಷಗಳಲ್ಲಿ ಅವರ ಫಾಲೋವರ್ಸ್ ಸಂಖ್ಯೆ 97,000 ದಾಟಿ ಪ್ರತಿ ನಿಮಿಷ ಕಳೆಯುತ್ತಿದ್ದಂತೆ ಫಾಲೋವರ್ಸ್ ಸಂಖ್ಯೆ ಬೆಳೆಯುತ್ತಾ ಹೋಗುತ್ತಿದೆ.
ಪ್ರಿಯಾಂಕ ಟ್ವಿಟರ್ ಹ್ಯಾಂಡಲ್ ನಿಂದ ಇಲ್ಲಿಯ ತನಕ ಯಾವೊಂದು ಟ್ವೀಟ್ ಬರದೇ ಇದ್ದರೂ ಅವರೀಗಾಗಲೇ ಏಳು ಮಂದಿಯನ್ನು ಫಾಲೋ ಮಾಡಿದ್ದು ಅವರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಸೇರಿದ್ದಾರೆ.
Next Story





