ರಾಜಸ್ಥಾನ: ದಲಿತ ಪೊಲೀಸ್ ಸಿಬ್ಬಂದಿಯ ವಿವಾಹ ದಿಬ್ಬಣದ ಮೇಲೆ ರಜಪೂತರ ದಾಳಿ
ಜೈಪುರ್, ಫೆ. 12: ರಾಜಸ್ಥಾನದ ದುಗರ್ ಗ್ರಾಮದಲ್ಲಿ ಮೇಲ್ಜಾತಿಯ ರಜಪೂತ ವ್ಯಕ್ತಿಗಳು ದಲಿತ ಪೊಲೀಸ್ ಓರ್ವರ ದಿಬ್ಬಣ ಮೆರವಣಿಗೆಯ ಮೇಲೆ ದಾಳಿ ನಡೆಸಿದ್ದಾರೆ.
ಈ ಪ್ರಕರಣ ಕುರಿತಂತ ಪೊಲೀಸರು ಕೆಲ ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದು ಇನ್ನು ಕೆಲವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಮದುವೆ ದಿಬ್ಬಣ ದುಗರ್ ಗ್ರಾಮ ಪ್ರವೇಶಿಸಬೇಕೆನ್ನುವಷ್ಟರಲ್ಲಿ ದಾಳಿ ನಡೆದಿತ್ತು ಎಂದು ವರ ಸವಾಯಿ ರಾಮ್ ಹೇಳಿದ್ದಾರೆ. ದಾಳಿಕೋರರು ತನ್ನನ್ನು ನಿಂದಿಸಿದ್ದಾರೆಂದೂ ಆತ ಆರೋಪಿಸಿದ್ದಾರೆ. ದಾಳಿಕೋರರನ್ನು ತಡೆಯಲು ಯತ್ನಿಸಿದಾಗ ಅವರು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದರಿಂದ ಹಲವರು ಗಾಯಗೊಂಡಿದ್ದಾರೆ.
Next Story