ಜಮೀನು ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ: ಕಂದಾಯ ಅಧಿಕಾರಿ ಎಸಿಬಿ ಬಲೆಗೆ
ದಾವಣಗೆರೆ,ಫೆ.12: ರೈತರೊಬ್ಬರ ಜಮೀನು ಖಾತೆ ಬದಲಾವಣೆಗೆ 50 ಸಾವಿರ ರೂ. ಲಂಚ ಪಡೆಯುತ್ತಿದ್ದ ಕಂದಾಯ ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ ಎನ್ನಲಾಗಿದೆ.
ತಾಲೂಕಿನ ಕಂದಾಯ ನಿರೀಕ್ಷಕ ಮಂಜುನಾಥ ಎಸಿಬಿ ಬಲೆಗೆ ಬಿದ್ದ ಆರೋಪಿ. ತಾಲೂಕಿನ ಬೆಳವನೂರು ಗ್ರಾಮದ ರೈತ ಸಂದೀಪ್ ಎಂಬವರಿಗೆ ಸೇರಿದ ಜಮೀನಿನ ಖಾತೆ ಬದಲಾವಣೆಗೆ ಕಂದಾಯ ನಿರೀಕ್ಷಕ ಮಂಜುನಾಥ ಬಳಿಗೆ ಹೋಗಿದ್ದಾಗ ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಬೆಳವನೂರು ಸಂದೀಪ್ ಎಸಿಬಿಗೆ ದೂರು ನೀಡಿದ್ದರು.
ಖಾತೆ ಬದಲಾವಣೆ ಮಾಡಿಕೊಡುವಂತೆ ಕಂದಾಯ ನಿರೀಕ್ಷಕ ಮಂಜುನಾಥ ಬಳಿ ಬೆಳವನೂರು ಸಂದೀಪ್ ಹೋಗಿದ್ದರು. ಆಗ ಸಂದೀಪ್‍ರಿಂದ ಹಣ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ ಮಂಜುನಾಥ ಎಸಿಬಿ ಬಲೆಗೆ ಬಿದ್ದಿದ್ದು, ಎಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





