ಮಂದಾರ್ತಿ ದೇವಸ್ಥಾನ ವಾರ್ಷಿಕ ಜಾತ್ರೆ: ಹೆಗ್ಗುಂಜೆ ಗ್ರಾಪಂನಲ್ಲಿ ಒಣದಿನ
ಉಡುಪಿ, ಫೆ.12: ಮಂದಾರ್ತಿಯ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯು ಫೆ.13ರಿಂದ 15ರವರೆಗೆ ನಡೆಯಲಿರುವುದರಿಂದ ಸುತ್ತ ಮುತ್ತಲಿನ ಜಿಲ್ಲೆಗಳಿಂದ ಸುಮಾರು 50 ಸಾವಿರಕ್ಕೂ ಅಧಿಕ ಭಕ್ತಾದಿಗಳು ಸೇರುವ ನಿರೀಕ್ಷೆ ಇದ್ದು, ಈ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡುವ ಹಾಗೂ ಯಾವುದೇ ಅಕ್ರಮ, ಅಹಿತಕರ ಘಟನೆಗಳು ನಡೆಯದಂತೆ ನಡೆಯುವ ಉದ್ದೇಶದಿಂದ ಫೆ.13ರ ಬೆಳಗ್ಗೆ 9 ರಿಂದ ಫೆ.15ರ ಮಧ್ಯರಾತ್ರಿ 12 ಗಂಟೆ ನಡೆಯುವ ಅವಧಿಯಲ್ಲಿ ಹೆಗ್ಗುಂಜೆ ಗ್ರಾಪಂ ವ್ಯಾಪ್ತಿ ಯೊಳಗಿರುವ ಎಲ್ಲಾ ಮದ್ಯ ಮಾರಾಟದ ಸನ್ನಧುಗಳನ್ನು ಹೊಂದಿರುವ ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ವೈನ್‌ಶಾಪ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಹೆಗ್ಗುಂಜೆ ಗ್ರಾಪಂ ವ್ಯಾಪ್ತಿಯಲಲಿ ಒಣದಿನ ಎಂದು ಘೋಷಿಸಿ ಮದ್ಯಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
Next Story





