ಕುಂದಾಪುರ: ಪ್ರಬಂಧ, ದೇಶಭಕ್ತಿಗೀತೆ ಸ್ಪರ್ಧೆ
ಉಡುಪಿ, ಫೆ.12: ಬಾಲಭವನ ಸೊಸೈಟಿ ಕುಂದಾಪುರದ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ 5ರಿಂದ 16 ವರ್ಷದೊಳಗಿನ ಮಕ್ಕಳಿಗೆ ದೇಶ ಭಕ್ತಿಗೀತೆ ಹಾಗೂ 10ರಿಂದ 16 ವರ್ಷದ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಫೆ.16ರಂದು ಬೆಳಗ್ಗೆ 10ಕ್ಕೆ ಕುಂದಾಪುರ ಗಾಂಧಿ ಮೈದಾನದ ಬಾಲಭವನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಲೋಕೋಪಯೋಗಿ ಕಚೇರಿ ಹಿಂದುಗಡೆ, ಎನ್‌ಹೆಚ್ 66, ಕುಂದಾಪುರ, (ದೂರವಾಣಿ: 08254-230807) ಇಲ್ಲಿಗೆ ಕಚೇರಿ ವೇಳೆಯಲ್ಲಿ ಸಂಪರ್ಕಿ ಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ವಿವರಗಳಿಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಲೋಕೋಪಯೋಗಿ ಕಚೇರಿ ಹಿಂದುಗಡೆ, ಎನ್‌ಹೆಚ್ 66, ಕುಂದಾಪುರ, (ದೂರವಾಣಿ:08254-230807) ಇಲ್ಲಿಗೆ ಕಚೇರಿ ವೇಳೆಯಲ್ಲಿ ಸಂಪರ್ಕಿ ಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story





